Log In
BREAKING NEWS >
ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ನಿಯಮ ಉಲ್ಲಂಘಿಸಿ ಕಟ್ಡಡ ನವೀಕರಣ ಆರೋಪ; ಕಂಗನಾ ರನೌತ್ ಮುಂಬೈ ಬಂಗಲೆ ಕೆಡವುವ ಕುರಿತು ಬಿಎಂಸಿ ನೋಟಿಸ್

ಮುಂಬೈ; ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವ ಬಾಲಿವುಡ್ ನಟಿ ಕಂಗನಾ ರನೌತ್ ಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ನೋಟಿಸ್ ನೀಡಿದ್ದು, ಅವರ ಮಣಿಕರ್ಣಿಕಾ ಕಚೇರಿ ಕೆಡವುವ ಕುರಿತು ಎಚ್ಚರಿಕೆ ನೀಡಿದೆ.

ಹೌದು.. ಶಿವಸೇನೆ ನಾಯಕರ ಬೆದರಿಕೆ ಹೊರತಾಗಿಯೂ ಮುಂಬೈಗೆ ಆಗಮಿಸಿರುವ ನಟಿ ಕಂಗನಾ ರನೌತ್ ಗೆ ಮಹಾರಾಷ್ಟ್ರ ಸರ್ಕಾರ ವೈಪ್ಲಸ್ ಭದ್ರತೆ ನೀಡಿದ ಬೆನ್ನಲ್ಲೇ ಇತ್ತ ಬೃಹನ್ ಮುಂಬೈ ಮಹಾನಗರ ಪಾಲಿಕೆ ಕಂಗನಾ ರನೌತ್ ಗೆ ನೋಟಿಸ್ ಜಾರಿ ಮಾಡಿದೆ. ಮುಂಬೈನ ಬಾಂದ್ರಾದಲ್ಲಿರುವ ಮಣಿಕರ್ಣಿಕಾ  ಕಚೇರಿಗೆ ನೋಟಿಸ್ ನೀಡಿದ್ದಾರೆ. ಕಂಗನಾ ಅವರು ನಿಯಮ ಬಾಹಿರವಾಗಿ ತಮ್ಮ ನಿವಾಸವನ್ನು ನವೀಕರಿಸಿದ್ದು, ಈ ಸಂಬಂಧ ಕಟ್ಟಡವನ್ನು ಕೆಡವುವ ಕುರಿತು ನೋಟಿಸ್ ನೀಡಿದೆ.

ಈ ಬಗ್ಗೆ ಸ್ವತಃ ಕಂಗನಾ ರನೌತ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ‘ತನ್ನ ಮುಂಬೈ ಕಚೇರಿಯ ಮೇಲೆ ಬಿಎಂಸಿ  ಅಧಿಕಾರಿಗಳು  ದಾಳಿ ನಡೆಸಿದ್ದಾರೆ. ಮುಂಬೈನ ತನ್ನ ‘ಮಣಿಕರ್ಣಿಕಾ’ ಕಚೇರಿಗೆ ಬಿಎಂಸಿ ಅಧಿಕಾರಿಗಳು ಭೇಟಿ ನೀಡಿದ್ದು, ಮಂಗಳವಾರ ಆಸ್ತಿಯನ್ನು ಕೆಡವಬಹುದೆಂದು ರನೌತ್ ಟ್ವಿಟ್ಟರ್ ಗೆ  ತಿಳಿಸಿದ್ದಾರೆ.

No Comments

Leave A Comment