Log In
BREAKING NEWS >
ಮಾ.5ರ೦ದು ಬೆಳಿಗ್ಗೆ 8ಗ೦ಟೆಗೆ ಪಣಿಯಾಡಿ ಶ್ರೀಅನ೦ತಪದ್ಮನಾಭ ದೇವಳದ ಗರ್ಭಗುಡಿಯ ಮಹಾದ್ವಾರದ ಹೊಸ್ತಿಲು ಸ್ಥಾಪನೆ ಕಾರ್ಯಕ್ರಮ ಜರಗಲಿದೆ....

ನಟಿ ಸಂಜನಾ ಗಲ್ರಾನಿಗೂ ಎದುರಾಯ್ತು ‘ಡ್ರಗ್ಸ್’ ಸಂಕಷ್ಟ: ಮನೆ ಮೇಲೆ ದಾಳಿ ಬಳಿಕ, ನಟಿ ಸಿಸಿಬಿ ವಶಕ್ಕೆ

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಬೆಳ್ಳಂ ಬೆಳಗ್ಗೆ ಸಿಸಿಬಿ ಅಧಿಕಾರಿಗಳು ನಟಿ ಸಂಜನಾ ಗಲ್ರಾನಿ ಮನೆ ಮೇಲೆ ದಾಳಿ ನಡೆಸಿದ್ದು, ಇದೀಗ ಸಂಜನಾ ಅವರನ್ನು ಸಿಸಿಬಿ ಅಧಿಕಾರಿಗಳು ಇಂದಿರಾನಗರದ ಫ್ಲ್ಯಾಟ್‌ನಲ್ಲಿ ವಶಕ್ಕೆ ಪಡೆದಿದ್ದಾರೆ.

ಸಂಜನಾ ಅವರಿಂದ ಅವರ ಮೊಬೈಲನ್ನೂ ಸಹ ವಶಕ್ಕೆ ಪಡೆದಿದ್ದು, ಇಂದಿರಾನಗರದ ಫ್ಲ್ಯಾಟ್‌ನಲ್ಲೇ ಸಿಸಿಬಿಯಿಂದ ವಿಚಾರಣೆ ನಡೆಯುತ್ತಿದೆ. ಹೆಚ್ಚಿನ ವಿಚಾರಣೆಗಾಗಿ ನಟಿ ಸಂಜನಾಳನ್ನು ಸಿಸಿಬಿ ಕಚೇರಿಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇಂದು ಬೆಳಿಗ್ಗೆಯಷ್ಟೇ ಇಂದಿರಾನಗರದಲ್ಲಿರುವ ಸಂಜನಾ ಅವರ ಮನೆ ಮೇಲೆ ಸಿಸಿಬಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಸಿದ್ದಾರೆ.

ಸಿಸಿಬಿ ದಾಳಿ ವೇಳೆ ನಟಿ ಸಂಜನಾ ಮನೆಯಲ್ಲಿ ಮಲಗಿದ್ದು, ನಿದ್ರೆಯಿಂದ ಎದ್ದಿರಲಿಲ್ಲ. ಸಿಸಿಬಿ ಪೊಲೀಸರು ಮನೆಯ ಬಳಿ ಬಂದ ಸಂದರ್ಭದಲ್ಲಿ ಸಂಜನಾ ತಾಯಿ ಬಾಗಿಲು ತೆಗೆದಿದ್ದಾರೆ. ನಂತರ ನೋಟಿಸ್ ತೋರಿಸಿದ ಅಧಿಕಾರಿಗಳು ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ಮಲಗಿದ್ದ ಸಂಜನಾ ಅವರಿಗೆ ವಿಚಾರವನ್ನು ತಿಳಿಸಿ, ತನಿಖೆಗೆ ಸಹಕಾರ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಶೋಧ ಕಾರ್ಯ ಪೂರ್ಣಗೊಂಡ ಬಳಿಕ ಸಂಜನಾ ಅವರನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.

No Comments

Leave A Comment