ಲಾಕ್ಡೌನ್ ತೆರವು: ಒಂದೇ ದಿನ ತಿರುಮಲ ತಿರುಪತಿಗೆ ಹರಿದು ಬಂತು ರೂ.1 ಕೋಟಿ ಆದಾಯ!
ತಿರುಮಲ: ಲಾಕ್’ಡೌನ್ ತೆರವುಗೊಂಡು ದೇಗುಲದ ಬಾಗಿಲು ತೆರೆದ ಒಂದೇ ದಿನದಲ್ಲಿ ತಿರುಮಲ ತಿರುಪತಿಯ ಹುಂಡಿಗೆ ರೂ.1 ಕೋಟಿ ಆದಾಯ ಬಂದಿದೆ ಎಂದು ತಿಳಿದುಬಂದಿದೆ.
ಟಿಟಿಡಿ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ಒಂದೇ ದಿನ ದೇಗುಲದ ಹುಂಡಿಗೆ ರೂ.1.02 ಕೋಟಿ ಬಂದಿರುವುದಾಗಿ ತಿಳಿಸಿದ್ದಾರೆ.
ಕೊರೋನಾ ವೈರಸ್ ವ್ಯಾಪಕವಾದ ಹಿನ್ನೆಲೆಯಲ್ಲಿ ದೇಗುಲಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಇದೀಗ ದೇಗುಲ ಪ್ರವೇಶಿಸಲು ಅವಕಾಶ ನೀಡಲಾಗಿದ್ದು, ಒಂದೇ ದಿನ ದೇವಾಲಯದ ಹುಂಡಿಗೆ ರೂ.1 ಕೋಟಿ ಬಂದಿರುವುದಾಗಿ ತಿಳಿಸಿದ್ದಾರೆ. ಶನಿವಾರ ಒಂದೇ ದಿನ ದೇಗುಲಕ್ಕೆ 13,486 ಮಂದಿ ಭಕ್ತರು ಭೇಟಿ ನೀಡಿದ್ದಾರೆಂದು ವರದಿಗಳು ತಿಳಿಸಿವೆ.