Log In
BREAKING NEWS >
ಸೋಮವಾರದಿ೦ದ ಚಿನ್ನಾಭರಣದ ಅ೦ಗಡಿ ಅಲ್ ಲಾಕ್ -ಚಿನ್ನ ಖರೀದಿಸಲೊ೦ದು ಅವಕಾಶ...

ಡ್ರಗ್ ಪೆಡ್ಲರ್ ರೊಂದಿಗೆ ರಾಗಿಣಿಯ ನಂಟು ಬಹಿರಂಗ: ಸಂಪೂರ್ಣ ಕಳಚಿತು ‘ತುಪ್ಪದ ಬೆಡಗಿಯ ಮುಖವಾಡ

ಬೆಂಗಳೂರು/ನವದೆಹಲಿ: ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ರಾಗಿಣಿಗೆ ಮತ್ತೊಂದು ಆಘಾತ ಎದುರಾಗಿದೆ.ಸಿಸಿಬಿ ಪೊಲೀಸರು ದೆಹಲಿಯಲ್ಲಿ ವೀರೇನ್ ಖನ್ನಾ ಮತ್ತೊಬ್ಬ ಡ್ರಗ್ ಪೆಡ್ಲರ್ ನನ್ನು ಬಂಧಿಸಿದ್ದು,  ಆತನೊಂದಿಗೂ ರಾಗಿಣಿ ನಂಟಿದೆ ಎನ್ನಲಾಗಿದೆ.

ಹೀಗಾಗಿ, ತನಗೂ ಡ್ರಗ್ಸ್ ಜಾಲಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಮಾಯಕಳಂತೆ ವರ್ತಿಸುತ್ತಿದ್ದ ರಾಗಿಣಿಯ ಮುಖವಾಡ ಸಂಪೂರ್ಣ ಕಳಚಿದೆ. ರಾಗಿಣಿ ದ್ವಿವೇದಿ ಮಾತ್ರವಲ್ಲದೆ, ಇನ್ನೂ ಹಲವು ನಟ, ನಟಿಯರ ಜತೆಗೂ ವೀರೇನ್ ಖನ್ನಾ ನಂಟು ಹೊಂದಿದ್ದಾನೆ ಎಂಬುದು ಬಹಿರಂಗವಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಸಂಬಂಧಿತ ಪಾರ್ಟಿಗಳ ಬಗ್ಗೆ ವೀರೇನ್ ಪ್ರಾಥಮಿಕ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಬಂಧಿತ ವೀರೇನ್ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಂಪರ್ಕ ಹೊಂದಿದ್ದನು. ಸಾಮಾಜಿಕ ಜಾಲತಾಣದಲ್ಲೂ ವೀರೇನ್ ಗೆ ಅಸಂಖ್ಯಾತ ಫಾಲೋರ್ಸ್ ಗಳಿದ್ದಾರೆ.

No Comments

Leave A Comment