Log In
BREAKING NEWS >
ಮಾ.5ರ೦ದು ಬೆಳಿಗ್ಗೆ 8ಗ೦ಟೆಗೆ ಪಣಿಯಾಡಿ ಶ್ರೀಅನ೦ತಪದ್ಮನಾಭ ದೇವಳದ ಗರ್ಭಗುಡಿಯ ಮಹಾದ್ವಾರದ ಹೊಸ್ತಿಲು ಸ್ಥಾಪನೆ ಕಾರ್ಯಕ್ರಮ ಜರಗಲಿದೆ....

ಸ್ಯಾಂಡಲ್ವುಡ್ ಡ್ರಗ್ ಪ್ರಕರಣ: 3 ದಿನ ಸಿಸಿಬಿ ಕಸ್ಟಡಿಗೆ ‘ತುಪ್ಪದ ಬೆಡಗಿ’ ರಾಗಿಣಿ!

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ ಪ್ರಕರಣ ಸಂಬಂಧ ನ್ಯಾಯಾಲಯ ನಟಿ ರಾಗಿಣಿಯನ್ನು ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ರಾತ್ರಿ ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಿದ್ದರು. ಈ ವೇಳೆ ನ್ಯಾಯಾಧೀಶರು ರಾಗಿಣಿಗೆ 3 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಆದೇಶಿಸಿದ್ದಾರೆ.

ಸದ್ಯ ರಾಗಿಣಿ ಅವರನ್ನು ಸಿಸಿಬಿ ಅಧಿಕಾರಿಗಳು ಮೆಡಿಕಲ್ ಪರೀಕ್ಷೆಗಾಗಿ ಬೋರಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಡ್ರಗ್ಸ್ ಸೇವನೆ ಮತ್ತು ಪೆಡ್ಲರ್ ಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ರಾಗಿಣಿಯನ್ನು ಸಿಸಿಬಿ ವಶಕ್ಕೆ ಪಡೆದಿತ್ತು.

ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ರಾಗಿಣಿ ಅವರು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ನಟಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್​​ 7ಕ್ಕೆ ಮುಂದೂಡಿದೆ. ಇದರ ಬೆನ್ನಲ್ಲೇ ಸಿಸಿಬಿ ಪೊಲೀಸರು ರಾಗಿಣಿಯನ್ನು ಬಂಧಿಸಿದ್ದರು.

ನಟಿ ರಾಗಿಣಿ ಆಪ್ತ ರವಿಶಂಕರ್ ವಶಕ್ಕೆ ಪಡೆದ ಬಳಿಕ ನಟಿ ರಾಗಿಣಿ ವಾಟ್ಸಪ್ ಚಾಟ್ ಡಿಲೀಟ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ವಾಟ್ಸಪ್ ಅಪ್ ಡಿಲೀಟ್ ಮಾಡಿ ಹೊಸ ಮೊಬೈಲ್ ಖರೀದಿಸಿ ವಾಟ್ಸಾಪ್ ಇನ್ ಸ್ಟಾಲ್ ಮಾಡಿಕೊಂಡಿದ್ದಾರೆ. ವಾಟ್ಸಪ್ ಚಾಟ್ ಸಿಗದ್ದಂತೆ ಮಾಡಿದ್ದಾರೆ.

No Comments

Leave A Comment