Log In
BREAKING NEWS >
ಶ್ರೀಕೃಷ್ಣಮಠದ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಕೆ-ಗದ್ದಲವೆಬ್ಬಿಸಿದ ಪೆರ೦ಪಳ್ಳಿಗೆ ತೀವ್ರ ಮುಖಭ೦ಗ........ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಶಿಕ್ಷಕರ ದಿನಾಚರಣೆ: ಗುರುಗಳ ನೆನೆದ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು: ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಕರ ಸೇವೆಯನ್ನು ದೇಶಾದ್ಯಂತ ಸ್ಮರಿಸಲಾಗುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ನೆನೆಯುತ್ತ ಶಿಕ್ಷಕ ವೃಂದಕ್ಕೆ ಶುಭಾಶಯ ತಿಳಿಸಿದ್ದಾರೆ.

ನನ್ನಂತಹವನಿಗೆ‌ ಒಲಿದು ಬಂದ ಗುರುಗಳು ಜಗದ‌ ಮಕ್ಕಳೆಲ್ಲರಿಗೂ ಸಿಗಲಿ
ಇದೇ ವೇಳೆ ಶಿಕ್ಷಕರ ದಿನಾಚರಣೆ ನಿಮಿತ್ತ ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ನೆನೆದ ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ನನ್ನಂತಹವನಿಗೆ‌ ಒಲಿದು ಬಂದ ಗುರುಗಳು ಜಗದ‌ ಮಕ್ಕಳೆಲ್ಲರಿಗೂ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ. ‘ಹಳ್ಳಿಯಲ್ಲಿ ಹುಟ್ಟಿದ  ನನ್ನಂತಹವನಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತು ಜನಸೇವೆ ಮಾಡುವ ಅವಕಾಶ ಕೂಡಿ ಬಂದಿದ್ದರೆ ಅದಕ್ಕೆ ನನ್ನನ್ನು ತಿದ್ದಿ ತೀಡಿ ಬೆಳೆಸಿದ ಗುರುಗಳು ಕಾರಣ. ಅವರಿಗೆ ತಲೆಬಾಗಿ ನಮಿಸುವೆ. ನನ್ನಂತಹವನಿಗೆ‌ ಒಲಿದು ಬಂದ ಗುರುಗಳು ಜಗದ‌ ಮಕ್ಕಳೆಲ್ಲರಿಗೂ ಸಿಗಲಿ ಎಂದು ಹಾರೈಸುತ್ತೇನೆ’ ಎಂದು ಶುಭ  ಕೋರಿದ್ದಾರೆ.

ಗುರು ಎ.ಜಿ. ರಾಮಚಂದ್ರ ರಾಯರನ್ನು ನೆನಪಿಸಿಕೊಂಡ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

ತಮ್ಮ ಮುಂದಿನ‌ ತಲೆಮಾರಾಗಿರುವ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು ಸಮಸ್ತ ಶಿಕ್ಷಕರಿಗೆ ಶಿಕ್ಷಕರ ದಿನದ ಶುಭಾಶಯಗಳು. ಈ ಸಂದರ್ಭದಲ್ಲಿ ನನಗೆ ರಾಜಕೀಯದ ಪಾಠ ಕಲಿಸಿದ ನನ್ನ ಗುರುಗಳಾದ ಎ.ಜಿ. ರಾಮಚಂದ್ರ  ರಾಯರನ್ನು ಸಹ ಮತ್ತೊಮ್ಮೆ ನೆನಪಿಸಿಕೊಳ್ಳುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಟ್ವೀಟ್ ಸಂದೇಶದ ಮೂಲಕ ತಿಳಿಸಿದ್ದಾರೆ.

ಶಿಕ್ಷಕ ವೃತ್ತಿ ಎಂಬುದು ಅತ್ಯಂತ ಕಠಿಣ ಮತ್ತು ಜವಾಬ್ದಾರಿಯುತ ವೃತ್ತಿ. ಎಲ್ಲರ ಬದುಕು ಸಮರ್ಥವಾಗಿ ರೂಪುಗೊಳ್ಳುವಲ್ಲಿ ಶಿಕ್ಷಕರ ಪಾತ್ರ ಹಿರಿದು. ಭಾರತದಲ್ಲಿ ಸೆಪ್ಟೆಂಬರ್ 5ನ್ನು ಪ್ರತಿವರ್ಷ ಶಿಕ್ಷಕರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರ್ಶ ಶಿಕ್ಷಕ, ಮಾಜಿ ರಾಷ್ಟ್ರಪತಿ, ಭಾರತ ರತ್ನಡಾ ಸರ್ವಪಲ್ಲಿ  ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣೆಯಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಇದು ನಮ್ಮ ಬದುಕನ್ನು ರೂಪಿಸಿದ ಶಿಕ್ಷಕರಿಗೆ ಧನ್ಯವಾದ, ಕೃತಜ್ಞತೆ ಸಲ್ಲಿಸಲು ಇರುವ ಅತ್ಯಂತ ಮಹತ್ವದ ದಿನವೂ ಹೌದು, ಹೀಗಾಗಿ, ಈ ಶುಭ ದಿನದಂದು ನಮಗೆ ಜೀವನವನ್ನು ರೂಪಿಸಿಕೊಳ್ಳಲು ಕಲಿಸಿದ ಎಲ್ಲಾ ಶಿಕ್ಷಕರಿಗೆ ,  ಶಿಕ್ಷಕರ ದಿನದ ಶುಭಾಶಯಗಳು ಎಂದು ದೇವೇಗೌಡ ತಿಳಿಸಿದ್ದಾರೆ. ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಟ್ವೀಟ್ ಮಾಡಿರುವ ಅವರು ಎಲ್ಲಾ ಶಿಕ್ಷಕರಿಗೂ ಶುಭ ಕೋರಿದ್ದಾರೆ.

No Comments

Leave A Comment