Log In
BREAKING NEWS >
ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಕ್ರಿಕೆಟ್ ಬೆಟ್ಟಿಂಗ್‌ ಕಾನೂನುಬದ್ಧಗೊಳಿಸಿ: ಶಶಿ ತರೂರ್‌ ಒತ್ತಾಯ

ನವದೆಹಲಿ: ಭಾರತದ ಕ್ರೀಡೆಯಲ್ಲಿ ಬೆಟ್ಟಿಂಗ್‌ ಅನ್ನು ಕಾನೂನುಬದ್ದಗೊಳಿಸಬೇಕೆಂದು ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭಾ ಸದಸ್ಯ ಶಶಿ ತರೂರ್‌ ಆಗ್ರಹಿಸಿದ್ದಾರೆ.

ಇದು ಸರ್ಕಾರಕ್ಕೆ ಹಾಗೂ ಕ್ರೀಡಾ ಮಂಡಳಿಗೆ ಲಾಭದಾಯಕವಾಗಲಿದೆ.ಇದರಿಂದ ಕ್ರಿಕೆಟ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಅನ್ನು ನಿಯಂತ್ರಿಸಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.

ಭಾರತೀಯ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ದೊಡ್ಡ ಅಪಾಯವಾಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಹಲವಾರು ಉನ್ನತ ಮಟ್ಟದ ಪ್ರಕರಣಗಳು ಹೊರಬಂದಿವೆ. ಕೆಲವು ವರ್ಷಗಳ ಹಿಂದೆ, ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕದ ಅಧಿಕಾರಿ ಅಲೆಕ್ಸ್ ಮಾರ್ಷಲ್ ಅವರು, ಭ್ರಷ್ಟಾಚಾರದಲ್ಲಿ ತೊಡಗಿರುವ  ಹೆಚ್ಚಿನ ಬುಕ್ಕಿಗಳು ಭಾರತೀಯರೇ ಎಂದು ಬಹಿರಂಗಪಡಿಸಿದ್ದರು.

ಕ್ರೀಡೆಯಲ್ಲಿ ಬೆಟ್ಟಿಂಗ್‌ ಅನ್ನು ಕಾನೂನು ಬಾಹಿರಗೊಳಿಸಿದರೆ,ಭಾರತದಲ್ಲಿನ ಅಪಾಯಕಾರಿ  ಸನ್ನಿವೇಶವನ್ನು ನಿಯಂತ್ರಿಸಬಹುದಾಗಿದೆ ಎಂದು ಶಶಿ ತರೂರ್‌ ಇತ್ತೀಚೆಗೆ ಸ್ಪೋರ್ಟ್ಸ್‌ಕೀಡಾ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

ಕ್ರೀಡಾ ಬೆಟ್ಟಿಂಗ್ ಅನ್ನು ಕಾನೂನುಬದ್ಧಗೊಳಿಸುವುದರ ಅನುಕೂಲಗಳನ್ನು ಅವರು ಪಟ್ಟಿ ಮಾಡಿದ್ದು,  ಸರ್ಕಾರವು ಈ ರೀತಿಯಾಗಿ ನ್ಯಾಯಯುತವಾದ ಆದಾಯವನ್ನು ಗಳಿಸಬಹುದು ಎಂದು ಹೇಳಿದ್ದಾರೆ.

13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸೆ.19 ರಿಂದ ಯುಎಇಯಲ್ಲಿ ಆರಂಭವಾಗುತ್ತಿದೆ.ನವೆಂಬರ್‌ 10ಕ್ಕೆ ಫೈನಲ್‌ ಪಂದ್ಯದೊಂದಿಗೆ ಟೂರ್ನಿ ಅಂತ್ಯವಾಗಲಿದೆ. ಕಳೆದ ಮಾರ್ಚ್‌29 ರಿಂದಲೇ ಫ್ರಾಂಚೈಸಿ ಲೀಗ್ ನಡೆಯಬೇಕಾಗಿತ್ತು. ಆದರೆ, ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿದ್ದರಿಂದ ಟೂರ್ನಿಯನ್ನು ಎರಡು ಬಾರಿ ಮುಂದೂಡಲಾಗಿತ್ತು. ಭಾರತದಲ್ಲಿ ಪ್ರಕರಣಗಳು ಜಾಸ್ತಿ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಟೂರ್ನಿಯನ್ನು ಯುಎಇಗೆ ಸ್ಥಳಾಂತರ ಮಾಡಲಾಗಿದೆ.

No Comments

Leave A Comment