Log In
BREAKING NEWS >
ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಸುಶಾಂತ್ ಪ್ರಕರಣದಲ್ಲಿ ‘ನಶೆ’ ನಂಟು: ರಿಯಾ ಚಕ್ರವರ್ತಿ, ಶೋವಿಕ್ ನಿವಾಸಕ್ಕೆ NCB ರೈಡ್

ಮುಂಬೈ: ನಟ ಸುಶಾಂತ್ ಸಿಂಗ್ ಸಾವು ಪ್ರಕರಣದ ತನಿಖೆಯಲ್ಲಿ ಮಾದಕ ದ್ರವ್ಯ ಪೂರೈಕೆ ನಂಟು ಬೆಸೆದುಕೊಂಡಿರುವ ಕಾರಣ ಸುಶಾಂತ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋವಿಕ್ ಚಕ್ರವರ್ತಿ ನಿವಾಸಕ್ಕೆ ಇಂದು ಮುಂಜಾನೆ ಮಾದಕ ದ್ರವ್ಯ ನಿಯಂತ್ರಣ ಘಟಕ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಂದು ಮುಂಜಾನೆ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಇದೇ ವೇಳೆ ಮತ್ತೊಂದು ಎನ್ ಸಿಬಿ ತಂಡ ಸುಶಾಂತ್ ಸಿಂಗ್ ರಜಪೂತ್ ಹೌಸ್ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ ಮನೆಗೂ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ರಿಯಾ ಚಕ್ರವರ್ತಿ

ನಟ ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ಆತನ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಪ್ರಮುಖ ಆರೋಪಿಯಾಗಿದ್ದಾರೆ. ಈಗಾಗಲೇ ಈ ಪ್ರಕರಣ ಸಿಬಿಐಗೆ ವರ್ಗಾವಣೆ ಆಗಿದೆ. ಹಣ ವರ್ಗಾವಣೆ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯವೂ ಪ್ರಕರಣದ ತನಿಖೆ ನಡೆಸುತ್ತಿದೆ. ಮಾದಕ ದ್ರವ್ಯ ಪೂರೈಕೆ ಮತ್ತು ಸೇವನೆ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಎನ್ ಸಿಬಿಯೂ ತನಿಖೆ ನಡೆಸುತ್ತಿದೆ.

No Comments

Leave A Comment