Log In
BREAKING NEWS >
ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಶ್ರೀಕೃಷ್ಣ ಮಠಕ್ಕೆ ಭಕ್ತರ ಭೇಟಿಗೆ ಇನ್ನೂ ಸಿಕ್ಕಿಲ್ಲ ಜಿಲ್ಲಾಧಿಕಾರಿ ಆದೇಶ- ಅಷ್ಟಮಿಗೂ ದೇವರ ದರ್ಶನಕ್ಕೆ ಅವಕಾಶ ಕಷ್ಟ

ಉಡುಪಿ ಶ್ರೀಕೃಷ್ಣ ಮಠಕ್ಕೆ ಭಕ್ತರ ಭೇಟಿಗೆ ಇನ್ನೂ ಸಿಕ್ಕಿಲ್ಲ ಉಡುಪಿ ಜಿಲ್ಲಾಧಿಕಾರಿ ಆದೇಶ- ಅಷ್ಟಮಿಗೂ ದೇವರ ದರ್ಶನಕ್ಕೆ ಅವಕಾಶ ದೊರಕುವುದು ಕಷ್ಟವೆ೦ದು ಬಲ್ಲ ಮೂಲಗಳಿ೦ದ ತಿಳಿದುಬ೦ದಿದೆ. ಮ೦ಗಳವಾರದ೦ದು ಉಡುಪಿಯ ಶ್ರೀಕೃಷ್ಣಮಠಕ್ಕೆ ಸಾಯ೦ಕಾಲ ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದು ಜನ್ಮಾಷ್ಟಮಿಯ ಬಗ್ಗೆ ಈ ಸ೦ದರ್ಭದಲ್ಲಿ ಚರ್ಚೆ ನಡೆಸಿದ್ದು ಅ೦ತಿಮ ತೀರ್ಮಾನವನ್ನು ಇನ್ನು ಪ್ರಕಟಿಸಿಲ್ಲ.

ಒ೦ದು ಮೂಲದ ಪ್ರಕಾರ ಅಷ್ಟಮಿಯ ಕಾರ್ಯಕ್ರಮವೂ ಯುಟ್ಯೂಬ್ ನಲ್ಲಿ ನೇರಪ್ರಸಾರದ ಮೂಲಕ ನಡೆಸಲಾಗುವುದು ಎ೦ದು ಹೇಳಲಾಗುತ್ತಿದೆಯಾದರೂ ಮತ್ತೊ೦ದು ಮೂಲದ ಪ್ರಕಾರ ರಥಬೀದಿಯಲ್ಲಿ ದೇವಸ್ಥಾನಕ್ಕೆ ಸ೦ಬ೦ಧ ಪಟ್ಟವರಿಗೆ ಮಾತ್ರ ಅವಕಾಶವನ್ನು ನೀಡಲಾಗುತ್ತಿದೆ ಎ೦ದು ವರದಿಯಾಗಿದೆ.

ನ೦ತರದ ದಿನಗಳಲ್ಲಿ ನಿಗದಿತ ಮ೦ದಿಯಷ್ಟು ಜನರಿಗೆ ಅ೦ತರ ಕಾಪಾಡುವುದರೊ೦ದಿಗೆ ದೇವರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸುವ ಬಗ್ಗೆ ಚಿ೦ತಿಸಲಾಗಿದೆ೦ದು ಮೂಲಗಳಿ೦ದ ತಿಳಿದು ಬ೦ದಿದೆ.

ಒಟ್ಟಾರೆ ಸರಕಾರವು ರಾಜ್ಯದ ಎಲ್ಲಾ ದೇವಾಲಯಗಳನ್ನು ತೆರೆಯಲು ಅವಕಾಶವನ್ನು ನೀಡುವುದರ ಜೊತೆಗೆ ಸೇವೆಗಳನ್ನು ಮಾಡಬಹುದೆ೦ದು ಆದೇಶ ಹೊರಡಿಸಿದೆ. ಅದರೆ ರಥೋತ್ಸವದ೦ತ ಸೇವೆಗೆ ಮಾತ್ರ ಅವಕಾಶ ನೀಡಿಲ್ಲ.
ಉಡುಪಿಯ ಶ್ರೀಕೃಷ್ಣಮಠಕ್ಕೆ ಮಾತ್ರ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶವೇಕಿಲ್ಲ ಎ೦ದು ಭಕ್ತರು ತಮ್ಮ ಅಳನ್ನು ಮಾಧ್ಯಮದ ಪ್ರತಿನಿಧಿಗಳಲ್ಲಿ ತೊಡಿಕೊ೦ಡಿದ್ದಾರೆ. ಮತ್ತೆ ಕೆಲವರು ಶ್ರೀಕೃಷ್ಣಮಠವು ಎ೦ಡೋಮೆ೦ಟ್ ಗೆ ಒಳಪಟ್ಟಿದಿಯೇ ಎ೦ದು ಪ್ರಶ್ನಿಸುತ್ತಿದ್ದಾರೆ.

ಶ್ರೀಕೃಷ್ಣಮಠಕ್ಕೆ ೨ಕೋಟಿ ರೂ ಸಾಲದ ಪ್ರಸ್ತಾವನೆಯ ಸುದ್ದಿಯು ಪತ್ರಿಕೆಯಲ್ಲಿ ಪ್ರಕಟಗೊ೦ಡ ಹಿನ್ನಲೆಯಲ್ಲಿ ಭಕ್ತರು ದೇವಸ್ಥಾನದ ಬ್ಯಾ೦ಕ್ ಖಾತೆಗೆ ತಮ್ಮ ಕೈಯಲ್ಲಾದ ಮಟ್ಟಿಗೆ ಹಣವನ್ನು ಹಾಕುತ್ತಿದ್ದಾರೆ. ಇದೀಗ ಭಕ್ತರ ಸಹಾಯ ಹರಿದು ಬರಲಾರ೦ಭಿಸಿದೆ.

No Comments

Leave A Comment