Log In
BREAKING NEWS >
ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಜಿಲ್ಲೆಯಲ್ಲಿ ಗಾಂಜಾ ಮಾರಾಟಗಾರರ ಬಂಧನ

ದೇವನಹಳ್ಳಿ: ನಗರದ ಹೊರವಲಯದ ಏರ್‌ಲೈನ್ಸ್‌ ಡಾಬಾದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ದೇವನಹಳ್ಳಿಯ ದಾಸರಬೀದಿ ನಾಗೇಶ್‌(25), ಹೊಸಕೋಟೆ ತಾಲೂಕಿನ ಕುಂಬಳಹಳ್ಳಿ ಗ್ರಾಮದ ನಿವಾಸಿ ಕೆ.ಮುನಿರಾಜು(33) ಬಂಧಿತರು. ಇವರಿಂದ 1.75 ಲಕ್ಷ ರೂ. ಮೌಲ್ಯದ 3.5 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ನಗರ ಹೊರ ವಲಯದ ಏರ್‌ಲೈನ್ಸ್‌ ಡಾಬಾದ ಬಳಿ ಗಾಂಜಾ ಸಾಗಣೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸಕೋಟೆ ಕಡೆಯಿಂದ ಗಾಂಜಾ ತಂದಿರುವುದಾಗಿ ಪೊಲೀಸರಿಗೆ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಗಾಂಜಾ ಮಾರಾಟದ ಬಹುದೊಡ್ಡದ ಜಾಲದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರುವ ದೇವನಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಡಿಸಿಪಿ ಭೀಮಶಂಕರ್‌ಗುಳೇದ್‌ ಮಾರ್ಗದರ್ಶನದಲ್ಲಿ ಎಸಿಪಿ ಸುಬ್ರಹ್ಮಣ್ಯ ಸೂಚನೆಯಂತೆ ದೇವನಹಳ್ಳಿ ಇನ್ಸ್‌ಪೆಕ್ಟರ್‌ ಮೊಹಮದ್‌ ರಫೀಕ್‌ ನೇತೃತ್ವದಲ್ಲಿ ಪಿಎಸ್‌ಐ ನಾಗರಾಜ್‌, ಅಪರಾಧ ವಿಭಾಗದ ಸಿಬ್ಬಂದಿಗಳಾದ ರವಿಪಾಟೀಲ್‌, ವಿಜಯ್‌ ಕುಮಾರ್‌, ಇಸ್ಮಾಯಿಲ್‌, ಗಿರೀಶ್‌ಬಾಬು ಮತ್ತಿತರ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಉಪ ಪೊಲೀಸ್‌ ಆಯುಕ್ತರು, ಈಶಾನ್ಯ ವಿಭಾಗ, ದೇವನಹಳ್ಳಿ ಪೊಲೀಸ್‌ ಠಾಣೆ ಅಧಿಕಾರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.

No Comments

Leave A Comment