Log In
BREAKING NEWS >
ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಬಾಡಿಗೆ ವಿಚಾರದ ಗಲಾಟೆ: ಇಬ್ಬರು ರೂಮ್ ಮೇಟ್ ಗಳನ್ನು ಕೊಂದು ಆರೋಪಿ ಎಸ್ಕೇಪ್

ಹೊಸದಿಲ್ಲಿ: ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದ ಮೂವರ ನಡುವೆ ಬಾಡಿಗೆ ವಿಚಾರದಲ್ಲಿ ನಡೆದ ಗಲಾಟೆಯೊಂದು ಜೋಡಿ ಕೊಲೆಯಲ್ಲಿ ಅಂತ್ಯವಾದ ಘಟನೆ ದಿಲ್ಲಿಯ ರಘುವೀರ್ ನಗರದಲ್ಲಿ ನಡೆದಿದೆ.

ಆರೋಪಿಯನ್ನು ಉತ್ತರ ಪ್ರದೇಶದ ಅಮ್ರೋಹ ಗ್ರಾಮದ ಶಾಕಿರ್ ಎಂದು ಗುರುತಿಸಲಾಗಿದೆ. ಕೃತ್ಯದ ನಂತರ ತನ್ನ ಗ್ರಾಮಕ್ಕೆ ಎಸ್ಕೇಪ್ ಆಗಿದ್ದ ಶಾಕಿರ್ ನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.

ಅಜಂ (45) ಮತ್ತು ಅಮೀರ್ ಹಸನ್ (46) ರಘುವೀರ್ ನಗರದಲ್ಲಿ ಬಾಡಿಗೆ ಕೋಣೆಯೊಂದರಲ್ಲಿ ತಿಂಗಳಿಗೆ ನಾಲ್ಕು ಸಾವಿರ ಬಾಡಿಗೆಯಂತೆ ವಾಸವಿದ್ದರು. ಶಾಕಿರ್ ಕೂಡಾ ಅವರ ಜೊತೆ ವಾಸವಾಗಿದ್ದ ಲಾಕ್ ಡೌನ್ ಸಮಯದಲ್ಲಿ ನಾಲ್ಕು ತಿಂಗಳು ಊರಿಗೆ ತೆರಳಿದ್ದ. 15 ದಿನಗಳ ಹಿಂದೆ ಶಾಕಿರ್ ರೂಮ್ ಗೆ ಮರಳಿದ್ದು, ಆದರೆ ಕಳೆದ ನಾಲ್ಕು ತಿಂಗಳ ಬಾಡಿಗೆ ನೀಡುವಂತೆ ಅಜಂ ಮತ್ತು ಅಮೀರ್ ಪೀಡಿಸಿದ್ದರು.

ಇದರಿಂದ ಕೋಪಗೊಂಡಿದ್ದ ಶಾಕಿರ್ ಆಗಸ್ಟ್ 30ರ ರಾತ್ರಿ ರೂಮ್ ಮೇಟ್ ಗಳು ಇಬ್ಬರು ಮಲಗಿದ್ದ ವೇಳೆ ಚಾಕುವಿನಿಂದ ತಿವಿದು ಕೊಲೆಗೈದಿದ್ದ. ನಂತರ ಚಾಕುವನ್ನು ಅಡಗಿಸಿಟ್ಟು ಪರಾರಿಯಾಗಿದ್ದ. ಪ್ರಕರಣ ಕೈಗೆತ್ತಿಕೊಂಡ ಖಯಾಲ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

No Comments

Leave A Comment