Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಟಾಪ್‌ ಸೀಡ್‌ ಓಪನ್‌ ಟೆನಿಸ್:‌ ಸೆರೆನಾ-ವೀನಸ್‌ ಮುಖಾಮುಖಿ

ಲೆಕ್ಸಿಂಗ್ಟನ್‌ (ಕೆಂಟುಕಿ): ಕೋವಿಡ್ ಕಾಲದಲ್ಲೂ ವಿಲಿಯಮ್ಸ್‌ ಸೋದರಿಯರ ಟೆನಿಸ್‌ ರೋಮಾಂಚನವೊಂದು ಗರಿಗೆದರಲಿದೆ. ವನಿತೆಯರ “ಟಾಪ್‌ ಸೀಡ್‌ ಓಪನ್‌’ ಕೂಟದ ದ್ವಿತೀಯ ಸುತ್ತಿನಲ್ಲಿ ವೀನಸ್‌ ವಿಲಿಯಮ್ಸ್‌ ಮತ್ತು ಸೆರೆನಾ ವಿಲಿಯಮ್ಸ್‌ ಪರಸ್ಪರ ಎದುರಾಗಲಿದ್ದಾರೆ.

ಕಳೆದ ರಾತ್ರಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ತವರಿನ ಎಡಗೈ ಆಟಗಾರ್ತಿ ಬರ್ನಾರ್ಡ್‌ ಪೆರಾ ಅವರ ದಿಟ್ಟ ಸವಾಲನ್ನು ನಿಭಾಯಿಸುವಲ್ಲಿ ಯಶಸ್ವಿಯಾದ ಸೆರೆನಾ ವಿಲಿಯಮ್ಸ್‌ 4-6, 6-4, 6-1 ಅಂತರದ ಗೆಲುವು ಸಾಧಿಸಿದರು. ಇನ್ನೊಂದು ಪಂದ್ಯದಲ್ಲಿ ವೀನಸ್‌ ವಿಲಿಯಮ್ಸ್‌ ಬೆಲರೂಸ್‌ನ ವಿಕ್ಟೋರಿಯಾ ಅಜರೆಂಕಾ ಅವರನ್ನು 6-3, 6-2 ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು.

ಉಳಿದ ಪಂದ್ಯಗಳಲ್ಲಿ ಯುಎಸ್‌ ಓಪನ್‌ ಚಾಂಪಿಯನ್‌ ಸ್ಲೋನ್‌ ಸ್ಟೀಫ‌ನ್ಸ್‌ ಕೆನಡಾದ ಲೇಲಾ ಫೆರ್ನಾಂಡೆಝ್ ಅವರನ್ನು, ಕಜಾಕ್‌ಸ್ಥಾನದ ಯುಲಿಯಾ ಪುಟಿನ್ಸೇವಾ ಆಸ್ಟ್ರೇಲಿಯದ ಅಜ್ಲಾ ಟೊಮ್ಜಾನೋವಿಕ್‌ ಅವರನ್ನು ಸೋಲಿಸಿದರು. ಆಲ್‌ ಅಮೆರಿಕನ್‌ ಕಾಳಗದಲ್ಲಿ ಕ್ಯಾರೋಲಿನಾ ಡೋಲ್‌ಹೈಡ್‌ ಅವರನ್ನು ಕೊಕೊ ಗಾಫ್ ಪರಾಭವಗೊಳಿಸಿದರು.

No Comments

Leave A Comment