Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಪಡುಬಿದ್ರೆ : ಸಮುದ್ರದ ಅಲೆಯ ರಭಸಕ್ಕೆ ಕೊಚ್ಚಿ ಹೋದ ಉಸ್ತುವಾರಿ ಪಾದರಕ್ಷೆ

ಉಡುಪಿ:ಪಡುಬಿದ್ರೆ ಕಡಲ್ಕೊರೆತ ಪ್ರದೇಶಕ್ಕೆ ವೀಕ್ಷಣೆಗೆ ತೆರಳಿದ ಗ್ರಹ ಸಚಿವ ಹಾಗು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿಯವರ ಪಾದರಕ್ಷೆ ಸಮುದ್ರದ ಅಲೆ ರಭಸಕ್ಕೆ ಸಿಲುಕಿ ಸ್ವಲ್ಪ ದೂರ ಕೊಚ್ಚಿ ಹೋದ ಘಟನೆ ಪಡುಬಿದ್ರೆಯಲ್ಲಿ ಇಂದು ಬೆಳ್ಳಿಗೆ ನಡೆದಿದೆ.

ಜಿಲ್ಲಾ ಪ್ರವಾಸದಲ್ಲಿ ನಿರತರಾದ ಸಚಿವರು ಪಡುಬಿದ್ರೆಯಲ್ಲಿ ಬಿಜೆಪಿ ಮುಖಂಡರ ಜೊತೆ ಕಡಲ್ಕೊರೆತ ವೀಕ್ಷಣೆಗೆ ತೆರಳಿದ ಸಂದರ್ಭ ಈ ಘಟನೆ ನಡೆಯಿತು. ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಪಾದರಕ್ಷೆ ಪಡೆಯಲು ಮುಂದೆ ಸಾಗುತ್ತಿದ್ದ ಸಚಿವರನ್ನು ಉಡುಪಿ ಜಿಲ್ಲಾ ಎಸ್. ಪಿ ವಿಷ್ಣುವರ್ಧನ್ ತಡೆದು ನಿಲ್ಲಿಸಿದರು ಸ್ವಲ್ಪ ಸಮಯದ ನಂತರ ಸಚಿವರ ಪಾದರಕ್ಷೆ ದಡ ಸೇರಿತು. ಅಲೆಯ ಅಬ್ಬರಕ್ಕೆ ಸಚಿವರು ಗಲಿಬಿಲಿಗೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಉದಯಕುಮಾರ್ ಶೆಟ್ಟಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಜೊತೆಗಿದ್ದರು.

No Comments

Leave A Comment