Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಎಂಜಿಎಂ ಕಾಲೇಜಿನ ಅಧ್ಯಾಪಕರಾಗಿದ್ದ ಪ್ರೊ ಬಿ ಬಾಲಚಂದ್ರ ಇನ್ನಿಲ್ಲ

ಉಡುಪಿ: ಇಲ್ಲಿನ ಎಂಜಿಎಂ ಕಾಲೇಜಿನಲ್ಲಿ ಎರಡು ದಶಕಗಳಿಗೂ ಮೀರಿ ಇತಿಹಾಸ ವಿಭಾಗದಲ್ಲಿ ಅಧ್ಯಾಪಕರು, ವಿಭಾಗ ಮುಖ್ಯಸ್ಥರು ಆಗಿ ನಿವೃತ್ತರಾಗಿದ್ದ ಪ್ರೊ ಬಿ ಬಾಲಚಂದ್ರ (83) ಅವರು ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಶನಿವಾರ ನಿಧನ ಹೊಂದಿದರು.

ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದ ಅವರು ನಂತರ ಕಾಲೇಜು ಅಧ್ಯಾಪಕತನಕ್ಕೆ ಬೇಕಾದ ಅರ್ಹತೆಯನ್ನು ಗಳಿಸಿಕೊಂಡರು ಅಧ್ಯಾಪಕರಾಗಿ ಜನಪ್ರಿಯರಾಗಿದ್ದ ಬಾಲಚಂದ್ರ ಅವರು ಎನ್ಎಸ್ಸಿ ಅಧಿಕಾರಿಯಾಗಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಯಕ್ಷಗಾನ, ನಾಟಕ ಇತ್ಯಾದಿ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಸಕ್ರಿಯರಾಗಿದ್ದರು.

ಅವರು ಪತ್ನಿ ಪ್ರೇಮ, ಮಕ್ಕಳಾದ ಪಂಜದಲ್ಲಿ ವೈದ್ಯರಾಗಿರುವ ಡಾಕ್ಟರ್ ಕೃಷ್ಣಮೂರ್ತಿ, ವಿದೇಶದಲ್ಲಿ ಇಂಜಿನಿಯರ್ ಆಗಿರುವ ಕೇಶವ ಕುಮಾರ್, ಹಾಗೂ ಬೆಂಗಳೂರಿನಲ್ಲಿ ಫಾರ್ಮಸಿ ಕಾಲೇಜಿನಲ್ಲಿ ಅಧ್ಯಾಪನ ನಡೆಸುತ್ತಿದ್ದ ಸರೋಜಾ ಅವರನ್ನು ಅಗಲಿದ್ದಾರೆ.

No Comments

Leave A Comment