Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಸುಶಾಂತ್ ಪ್ರಕರಣದಲ್ಲಿ ಮುಂಬೈ ಪೊಲೀಸರು ರಿಯಾಗೆ ಸಹಾಯ ಮಾಡಿದ್ದಾರೆ; ಬಿಹಾರ ಪೊಲೀಸ್

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಗೆ ಮುಂಬೈ ಪೊಲೀಸರು ತಡೆಯೊಡ್ಡುವ ಮೂಲಕ ರಿಯಾ ಚಕ್ರವರ್ತಿಗೆ ಸಹಾಯ ಮಾಡಿರುವುದಾಗಿ ಬಿಹಾರ ಸರ್ಕಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಆರೋಪಿಸಿದೆ.

ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್ ಅವರು ಪಾಟ್ನಾದಲ್ಲಿ ಸಲ್ಲಿಸಿದ್ದ ದೂರಿನ ತನಿಖೆಯನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಬೇಕೆಂಬ ಕೋರಿಕೆಯ ರಿಯಾ ಸಿಂಗ್ ಅರ್ಜಿಗೆ ಬಿಹಾರ ಸರ್ಕಾರ ಆಕ್ಷೇಪಣೆ ಸಲ್ಲಿಸಿ ವಾದ ಮಂಡಿಸಿದೆ ಎಂದು ವರದಿ ತಿಳಿಸಿದೆ.

ಜೂನ್ 14ರಂದು ಮುಂಬೈನ ಬಾಂದ್ರಾದ ಅಪಾರ್ಟ್ ಮೆಂಟ್ ನಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸುವ ಬಿಹಾರ ಪೊಲೀಸರ ಕಾರ್ಯಕ್ಷೇತ್ರದ ವ್ಯಾಪ್ತಿಯನ್ನು ರಿಯಾ ಚಕ್ರವರ್ತಿ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು.

ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಆದರೆ ಇದು ಮಾನಸಿಕ ಒತ್ತಡದಿಂದ ಅಥವಾ ಸಿನಿಮಾ ಇಂಡಸ್ಟ್ರಿಯ ದ್ವೇಷದಿಂದ ಸಂಭವಿಸಿದ ಸಾವಿನ ಪ್ರಕರಣವಾಗಿದೆಯಾ ಎಂಬ ಬಗ್ಗೆ ತನಿಖೆ ನಡೆಯಬೇಕಾಗಿದೆ ಎಂದು ತಿಳಿಸಿದ್ದಾರೆ.

ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್ ಅವರು ಪಾಟ್ನಾದಲ್ಲಿ ರಿಯಾ ಚಕ್ರವರ್ತಿ ವಿರುದ್ಧ ಎಫ್ ಐಆರ್ ದಾಖಲಿಸಿದ ನಂತರ ಬಿಹಾರ ಪೊಲೀಸರು ಸುಶಾಂತ್ ಸಾವಿನ ತನಿಖೆಯನ್ನು ಆರಂಭಿಸಿದ್ದರು. ರಿಯಾ ಸುಶಾಂತ್ ಸಿಂಗ್ ಬಳಿ ಇದ್ದ ಹಣವನ್ನೆಲ್ಲಾ ಲಪಟಾಯಿಸಿ, ಆತನಿಗೆ ಮಾನಸಿಕ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ಆರೋಪಿಸಿದ್ದರು ಎಂದು ವರದಿ ತಿಳಿಸಿದೆ.

ಸುಶಾಂತ್ ಪ್ರಕರಣದಲ್ಲಿ ಪಾಟ್ನ ಪೊಲೀಸರಿಗೆ ಕಾರ್ಯ ವ್ಯಾಪ್ತಿ ಒಳಪಡುತ್ತದೆ. ಯಾಕೆಂದರೆ ಸುಶಾಂತ್ ಸಿಂಗ್ ತಂದೆ ಪಾಟ್ನದವರು ಎಂದು ಬಿಹಾರ ಸರ್ಕಾರ ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಿದೆ ಎಂದು ವರದಿ ವಿವರಿಸಿದೆ.

ಮುಂಬೈ ಪೊಲೀಸರ ಯಾವುದೇ ರೀತಿಯ ಸಹಕಾರ ಇಲ್ಲದೇ ಪಾಟ್ನ ಪೊಲೀಸರು ಸುಶಾಂತ್ ಸಿಂಗ್ ಅವರ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದೊಂದು ತುಂಬಾ ಸೂಕ್ಷ್ಮ ಹಾಗೂ ಜಟಿಲವಾದ ಪ್ರಕರಣವಾಗಿದ್ದರಿಂದ ಸಿಬಿಐ ತನಿಖೆ ನಡೆಸಲು ಶಿಫಾರಸು ಮಾಡಿರುವುದಾಗಿ ಬಿಹಾರ ಸರ್ಕಾರ ತಿಳಿಸಿದೆ.

No Comments

Leave A Comment