Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಕಡಲ್ಕೊರೆತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಆರ್.ಅಶೋಕ್ ಭೇಟಿ, ಪರಿಶೀಲನೆ

ಉಡುಪಿ:  ಪ್ರವಾಹ, ನೆರೆ ಮತ್ತು ಪ್ರಕೃತಿ ವಿಕೋಪದಂತಹ ಸಮಸ್ಯೆಗಳನ್ನು ಎದುರಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಉಡುಪಿ ಮತ್ತು ಪಡುಬಿದ್ರಿಲ್ಲಿ ಕಡಲ್ಕೊರತತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಕಾಪು ಮತ್ತು ತೆಕ್ಕಟ್ಟೆಯಲ್ಲಿ ಸುನಾಮಿ ಸೆಂಟರ್ ಗಳು ಪ್ರವಾಹ ಸಂತ್ರಸ್ತರಿಗಾಗಿ ಸಿದ್ಧವಾಗಿದೆ.

ಕಾರ್ಕಳದಲ್ಲಿ ಹೊಸದಾಗಿ ವಿವಿಧೋದ್ದೇಶ ಆಶ್ರಯ ತಾಣ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಅನುದಾನವನ್ನು ಸರಕಾರ
ಮಂಜೂರುಗೊಳಿಸಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ದ.ಕ. ಜಿಲ್ಲಾ ಉಸ್ತವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಜಿ. ಜಗದೀಶ್, ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್ ಉಪ ಸ್ಥಿತರಿದ್ದರು.

No Comments

Leave A Comment