Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಮುಂಬೈ: ಭೋಜ್ ಪುರಿ ನಟಿಯ ಮೃತದೇಹ ಪತ್ತೆ, ಆತ್ಮಹತ್ಯೆಯ ಶಂಕೆ ವ್ಯಕ್ತಪಡಿಸಿದ ಪೊಲೀಸರು

ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಮತ್ತೊಬ್ಬ ನಟಿಯ ಮೃತದೇಹ ಪತ್ತೆಯಾಗಿದೆ. ಉತ್ತರ ಮುಂಬೈಯ ಉಪನಗರದ ಅಪಾರ್ಟ್ ಮೆಂಟ್ ನಲ್ಲಿ ಬಾಡಿಗೆಗಿದ್ದ ಭೋಜ್ ಪುರಿ ನಟಿ ಅನುಪಮಾ ಪಾಠಕ್ ಅವರ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಬಿಹಾರದಿಂದ ಮುಂಬೈಗೆ ಸಿನೆಮಾ ಜಗತ್ತಿನಲ್ಲಿ ಅವಕಾಶ ಅರಸಿ ಬಂದಿದ್ದ ಅನುಪಮಾ ಪಾಠಕ್ ಹಲವು ಭೋಜ್ ಪುರಿ ಸಿನೆಮಾಗಳಲ್ಲಿ ಮತ್ತು ಟಿವಿ ಶೋಗಳಲ್ಲಿ ಭಾಗವಹಿಸಿದ್ದರು.

ತಾವು ಸಾಯುವುದಕ್ಕೆ ಒಂದು ದಿನ ಮೊದಲು ಅನುಪಮಾ ಫೇಸ್ ಬುಕ್ ನಲ್ಲಿ ವಿಡಿಯೊ ಶೇರ್ ಮಾಡಿ ತಾವು ಮೋಸ ಹೋಗಿದ್ದು ಯಾರನ್ನೂ ನಂಬದಿರುವ ಸ್ಥಿತಿಗೆ ಬಂದಿದ್ದೇನೆ. ಯಾರೂ ಸಹಾಯಕ್ಕೆ ಬರುತ್ತಿಲ್ಲ ಎಂದು ಅತ್ತುಕೊಂಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಮಯದಲ್ಲಿ ಇಡೀ ಚಿತ್ರರಂಗ ಆಘಾತದಲ್ಲಿರುವ ಸಂದರ್ಭದಲ್ಲಿ ಮತ್ತೊಬ್ಬ ಕಲಾವಿದೆಯ ಸಾವು ಸಂಭವಿಸಿರುವುದು ಕಲಾವಿದರ ಬದುಕಿನ ಬಗ್ಗೆ ಆತಂಕವನ್ನು ಹೆಚ್ಚಿಸುತ್ತಿದೆ.

ಇದಕ್ಕೂ ಮುನ್ನ ಜೂನ್ 9ರಂದು ಸುಶಾಂತ್ ಸಿಂಗ್ ರಜಪೂತ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್, ಮೇ 15ರಂದು ಕಿರುತೆರೆ ನಟ ಮನ್ಮೀತ್ ಗ್ರೆವಾಲ್, ಕಳೆದ ಬುಧವಾರ ಮತ್ತೊಬ್ಬ ಕಿರುತೆರೆ ನಟ ಸಮೀರ್ ಶರ್ಮ ಆತ್ಮಹತ್ಯೆ ಮಾಡಿಕೊಂಡಿದ್ದರು.

No Comments

Leave A Comment