Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಬೈರುತ್ ಬಂದರು ಪ್ರದೇಶದಲ್ಲಿ ಅವಳಿ ಸ್ಪೋಟ: 135 ಮಂದಿ ಸಾವು, ಸಾವಿರಾರು ಜನರಿಗೆ ಗಂಭೀರ ಗಾಯ

ಬೈರುತ್: ಲೆಬನಾನ್ ರಾಜಧಾನಿ ಬೈರುತ್ ನಗರದ ಬಂದರು ಪ್ರದೇಶದಲ್ಲಿ ಎರಡು ಭಾರೀ ಸ್ಟೋಟ ಸಂಭವಿಸಿದ್ದು 135 ಮಂದಿ ದಾರುಣವಾಗಿ ಮೃತಪಟ್ಟು, ಸಾವಿರಾರು ಜನ ಗಾಯಗೊಂಡಿದ್ದಾರೆ. ಸ್ಪೋಟದ ರಭಸಕ್ಕೆ ಕಟ್ಟಡಗಳು ಅಲುಗಾಡಿದ್ದು ರಾಜಧಾನಿಯಾದ್ಯಂತ ಭೀತಿ ಸೃಷ್ಟಿಸಿದೆ.

ಅವಳಿ ಸ್ಪೋಟದಲ್ಲಿ ಸಾವಿರಾರು ಕಟ್ಟಡಗಳು ಹಾನಿಗೊಳಗಾಗಿದ್ದು ಘಟನೆಗೆ  ನಿಖರ ಕಾರಣ ತಿಳಿದುಬಂದಿಲ್ಲ. ಸ್ಪೋಟದ ತೀವ್ರತೆಗೆ ಬೆಂಕಿಯ ಜ್ವಾಲೆಗಳು ಮಾತ್ರವಲ್ಲದೆ ಸಮುದ್ರದ ಅಲೆಗಳು  ಮಗಿಲೆತ್ತರಕ್ಕೆ ಏರಿದ್ದು, ಘಟನೆಯ ವಿಡಿಯೋಗಳು ಭಯಾನಕವಾಗಿದೆ. ಬೈರುತ್ ನಗರ ರಕ್ತಸಿಕ್ತವಾಗಿ ಮಾರ್ಪಟ್ಟಿದ್ದು ಎಲ್ಲೆಂದರಲ್ಲಿ ಮೃತದೇಹಗಳು, ಕಟ್ಟಡದ ಅವಶೇಷಗಳಡಿ ಸಿಲುಕಿದ ಗಾಯಾಳುಗಳು ಕಂಡುಬರುತ್ತಿದ್ದಾರೆ. ಸುಮಾರು 3,700 ಮಂದಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಕಳೆದ ಹಲವು ವರ್ಷಗಳಿಂದ ಯುದ್ಧಭೂಮಿಯಂತಾಗಿರುವ ಲೆಬನಾನ್‌ನಲ್ಲಿ ಕಳೆದ ಕೆಲ ದಿನಗಳಿಂದ ನಿಶಬ್ದತೆ ಆವರಿಸಿತ್ತು.  ಆದರೆ ಮಂಗಳವಾರ ತಡರಾತ್ರಿ  ಬೈರುತ್ ನಗರದ ಬಂದರಿನಲ್ಲಿ ಸಂಭವಿಸಿರುವ ಭಾರೀ ಸ್ಪೋಟವು ಲೆಬನಾನ್‌ನಲ್ಲಿ ಮತ್ತೆ ಆಘಾತದ ತರಂಗಗಳನ್ನು ಎಬ್ಬಿಸಿವೆ.

ಬಂದರು ಪ್ರದೇಶದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಕಳೆದ ಒಂದು ವರ್ಷದಲ್ಲಿ ಸಂಭವಿಸಿದ ಭಾರೀ ಸ್ಪೋಟ ಇದಾಗಿದೆ. ನಾವು ದೊಡ್ಡ ದುರಂತವೊಂದಕ್ಕೆ  ಸಾಕ್ಷಿಯಾಗುತ್ತಿದ್ದೇವೆ ಎಂದು ಲೆಬನಾನ್‌ ರೆಡ್‌ಕ್ರಾಸ್‌ ನ ಮುಖ್ಯಸ್ಥ ಜಾರ್ಜ್ ಕೆಟಾನಿ ತಿಳಿಸಿದ್ದಾರೆ. ಸ್ಫೋಟದ ಸದ್ದು 200 ಕಿಮೀ ದೂರದವರೆಗೂ ಕೇಳಿ ಬಂದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.

ಸ್ಥಳದಲ್ಲಿ ಆ್ಯಂಬುಲೆನ್ಸ್ ಗಳು ಹಾಗೂ ಸೇನಾ ಹೆಲಿಕಾಪ್ಟರ್ ಗಳು ಕಾರ್ಯಾಚರಣೆಗಿಳಿದಿದ್ದು, ರಕ್ಷಣಾ ಕಾರ್ಯಗಳನ್ನು ನಡೆಸುತ್ತಿವೆ. ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿ ಹೋಗಿದ್ದು, ಆಸ್ಪತ್ರೆಯ ಸಿಬ್ಬಂದಿಗಳು ರಕ್ತದಾನ ಮಾಡುವಂತೆ ಜನರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

No Comments

Leave A Comment