Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಮು೦ಬರುವ ಮಾಗ ಮಾಸದಲ್ಲಿ ಭಜನಾ ಸಪ್ತಾಹ ಕಾರ್ಯಕ್ರಮವು ಜರಗಲಿದೆ.....ವರ್ಷ೦ಪ್ರತಿ ನವರಾತ್ರೆಯ೦ದು ನಡೆಯಲಿರುವ ಶ್ರೀಶಾರದಾ ಪೂಜಾ ಕಾರ್ಯಕ್ರಮವು ವಿಜೃ೦ಭಣೆಯಲ್ಲಿ ಜರಗಲಿದೆ....

ಬೆಂಗಳೂರು: ಬರೋಡಾ ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ 85 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಬೆಂಗಳೂರು: ಬ್ಯಾಂಕ್ ಲಾಕರ್​ನಲ್ಲಿಟ್ಟಿದ್ದ 85 ಲಕ್ಷ ರೂ. ಮೌಲ್ಯದ ಚಿನ್ನಾಭರಣ  ಕಳ್ಳತನವಾಗಿರುವುದಾಗಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಯನಗರ ಬ್ರ್ಯಾಂಚ್ ಬ್ಯಾಂಕ್ ಆಫ್ ಬರೋಡದ ಲಾಕರ್‌ನಲ್ಲಿಟ್ಟಿದ್ದ ತಮ್ಮ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು  ಆರೋಪಿಸಿ ಜೆಪಿ ನಗರದ ಶಿವ ಪ್ರಸಾದ್ (52) ಎಂಬುವವರು ದೂರು ದಾಖಲಿಸಿದ್ದಾರೆ.

ಶಿವಪ್ರಸಾದ್  ಅವರು ತಮ್ಮ  ಬ್ಯಾಂಕ್​ ಲಾಕರ್​ನಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ 1.73 ಕೆಜಿ  ಚಿನ್ನಾಭರಣ ಇಟ್ಟಿದ್ದರು. ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಾದ ಪರಿಣಾಮ  ಅವರು ಬ್ಯಾಂಕಿನತ್ತ ಸುಳಿದಿರಲಿಲ್ಲ.  ಜು. 22 ರಂದು ಬ್ಯಾಂಕ್ ಲಾಕರ್ ಓಪನ್ ಮಾಡಿದಾಗ  50 ಗ್ರಾಂ ಪೀಕಾಕ್ ಚೈನ್, 45 ಗ್ರಾಂ ಒಂದು ರೌಂಡ್ ಬಾಲ್ ಬೈನ್, 1200 ಗ್ರಾಂ ಗಟ್ಟಿ  ಚಿನ್ನ ಸೇರಿ 1.73 ಕೆಜಿ ಚಿನ್ನಾಭರಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

 ಗಾಬರಿಗೊಂಡ ಶಿವಪ್ರಸಾದ್ ಅವರು ಬ್ಯಾಂಕ್ ಸಿಬ್ಬಂದಿ ಕಳವು ಮಾಡಿದ್ದಾರೋ ಅಥವಾ  ಬ್ಯಾಂಕಿಗೆ ಬಂದಿದ್ದ ಯಾರಾದರೂ
ಕಳವು ಮಾಡಿದ್ದಾರೋ ಎಂಬುದನ್ನು ತನಿಖೆ ಮಾಡಿ ಆರೋಪಿಗಳ  ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

No Comments

Leave A Comment