Log In
BREAKING NEWS >
ಉಡುಪಿ ಶ್ರೀಕೃಷ್ಣಾಪುರ ಮಠಾಧೀಶರ 4ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ.........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ನಿಲ್ಲದ ಕೊರೋನಾರ್ಭಟ: ರಾಜ್ಯದಲ್ಲಿ ಇಂದು 5,532 ಸೋಂಕು ದೃಢ, ಬೆಂಗಳೂರಿನಲ್ಲಿ 2,105 ಸೋಂಕು, 4077 ಡಿಸ್ಚಾರ್ಜ್!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದ್ದು, ಭಾನುವಾರ 5,532 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,34,819ಕ್ಕೆ ಏರಿಕೆಯಾಗಿದೆ.

ಇಂದು ರಾಜ್ಯದಲ್ಲಿ 5,532 ಹೊಸ ಪ್ರಕರಣಗಳು ವರದಿಯಾಗಿದ್ದು, 84 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಒಟ್ಟು 2,496 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇನ್ನು ರಾಜ್ಯದಲ್ಲಿ ಚೇತರಿಕೆ ಪ್ರಮಾಣವೂ ಉತ್ತಮವಾಗಿದ್ದು, ದಿನವೊಂದರಲ್ಲಿ 4077 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ 57,725 ಮಂದಿ ಗುಣಮುಖರಾಗಿದ್ದಾರೆ.

ಒಟ್ಟು 1,34,819 ಸೋಂಕಿತರ ಪೈಕಿ 74,590 ಸಕ್ರಿಯ ಪ್ರಕರಣಗಳಿದ್ದು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ನಗರದಲ್ಲಿ ಕೋವಿಡ್‌ ಮಹಾಮಾರಿಯ ಆರ್ಭಟ ಎಂದಿನಂತೆ ಮುಂದುವರಿದಿದ್ದು, 2105 ಹೊಸ ಪ್ರಕರಣಗಳು ವರದಿಯಾಗಿವೆ. ಅಲ್ಲದೆ ನಗರದಲ್ಲಿ ಇಂದು 21 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

No Comments

Leave A Comment