Log In
BREAKING NEWS >
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ; ಮುಖ್ಯ ಆರೋಪಿ ನವೀನ್ ಸೇರಿದಂತೆ 110 ಮಂದಿ ಬಂಧನ...

ಆಗಸದಲ್ಲಿ ವಿಮಾನಗಳ ಮುಖಾಮುಖಿ ಢಿಕ್ಕಿ; ಅಮೆರಿಕದ ಜನಪ್ರತಿನಿಧಿ ಸೇರಿ 7 ಮಂದಿ ದುರ್ಮರಣ/7 Killed as two planes crash in Alaska, officials say

ಅಲಾಸ್ಕ: ಆಗಸದಲ್ಲೇ ವಿಮಾನಗಳ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಅಮೆರಿಕದ ಜನಪ್ರತಿನಿಧಿ ಸೇರಿದಂತೆ 7 ಮಂದಿ ದುರ್ಮರಣಕ್ಕೀಡಾದ ಘಟನೆ ಅಮೆರಿಕದ ಅಲಾಸ್ಕದಲ್ಲಿ ನಡೆದಿದೆ.

ಅಲಾಸ್ಕದ ಸೊಲ್ಡೋಟ್ನಾ ವಿಮಾನ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದ್ದು, ಇಂದು ಮುಂಜಾನೆ ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಲಾಸ್ಕದ ಜನ ಪ್ರತಿನಿಧಿ ಗೆರಿ ಕ್ನಪ್ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಓರ್ವರಾಗಿದ್ದಾರೆ.  ಈ ಭೀಕರ ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಜನ ಪ್ರತಿನಿಧಿ ಗೆರಿ ಕ್ನಪ್ ಅವರು ವಿಮಾನವೊಂದನ್ನು ಚಲಾಯಿಸುತ್ತಿದ್ದರು ಮತ್ತು ವಿಮಾನದಲ್ಲಿ ಇವರು ಏಕಾಂಗಿಯಾಗಿದ್ದರು. ಮತ್ತೊಂದು ವಿಮಾನದಲ್ಲಿ ನಾಲ್ಕು ಜನ ಪ್ರವಾಸಿಗರು, ಓರ್ವ ಗೈಡ್ ಹಾಗೂ ವಿಮಾನದ ಪೈಲಟ್ ಇದ್ದರು. ಅಪಘಾತದ ಬಳಿಕ ಎಲ್ಲರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ವಿಮಾನಗಳು ಡಿಕ್ಕಿ ಹೊಡೆದ ನಂತರ ಅದರ ಭಾಗಗಳು ಅಲಾಸ್ಕಾ ಹೆದ್ದಾರಿಯ ಮೇಲೆ ಬಿದ್ದಿದ್ದವು. ಈ ವೇಳೆ ಸ್ಥಳೀಯರು ವಿಮಾನದೊಳಗಿದ್ದವರನ್ನು ಹೊರಗೆ ಎಳೆದಿದ್ದು, ಈ ವೇಳೆ ಗಂಭೀರವಾಗಿದ್ದ ಓರ್ವ ಪ್ರಯಾಣಿಕನನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ಸಫಲವಾಗಲಿಲ್ಲ. ಆತ ಕೂಡ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.  ಅಪಘಾತ ಸಂಭವಿಸಲು ಕಾರಣವೇನು ಎಂದು ತಿಳಿದುಬಂದಿಲ್ಲ .

No Comments

Leave A Comment