Log In
BREAKING NEWS >
ಉಡುಪಿ ಶ್ರೀಕೃಷ್ಣಾಪುರ ಮಠಾಧೀಶರ 4ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ.........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಅಮೆರಿಕ: ಚಾಕುವಿನಿಂದ ಇರಿದು ಕೇರಳ ಮೂಲದ ನರ್ಸ್ ಹತ್ಯೆ

ಅಮೆರಿಕ: ದಕ್ಷಿಣ ಫ್ಲೋರಿಡಾದ ಕೋರಲ್ ಸ್ಪ್ರಿಂಗ್ಸ್‌ನಲ್ಲಿರುವ ಬ್ರೋವರ್ಡ್ ಹೆಲ್ತ್ ಆಸ್ಪತ್ರೆಯಲ್ಲಿ ಕೇರಳದ ದಾದಿಯೊಬ್ಬಳನ್ನು ಇರಿದು ಕೊಂದ ಘಟನೆಗೆ ಸಂಬಂಧಿಸಿದಂತೆ, ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ನರ್ಸ್ ನ್ನು ಕೇರಳದ ಕೊಟ್ಟಾಯಂನ ಪಿರವಂ ಮೂಲದ ಮೆರಿನ್ ಜಾಯ್ (26) ಎಂದು ಗುರುತಿಸಲಾಗಿದೆ. “ಮೆರಿನ್ ಜಾಯ್ ಅವರು ಮಂಗಳವಾರ ಬೆಳಿಗ್ಗೆ 7.30 ರ ಹೊತ್ತಿಗೆ ಕರ್ತವ್ಯ ಮುಗಿಸಿ ಮನೆಗೆ ಮರಳೆಂದು ಪಾರ್ಕಿಂಗ್ ಬಳಿ ಬಂದಾಗ ವ್ಯಕ್ತಿಯೊಬ್ಬರು ಮೆರಿನ್‌ ಅವರನ್ನು ತನ್ನ ಬಳಿಗೆ ಎಳೆದು ಹಲವು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಇತರರು ನರ್ಸ್‌ ಸಹಾಯಕ್ಕೆ ಬರುವಷ್ಟರಲ್ಲಿ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಕೊನೆ ಉಸಿರೆಳೆದರು” ಎಂದು ಕೋರಲ್ ಸ್ಪ್ರಿಂಗ್ಸ್ ಪೊಲೀಸ್ ಉಪ ಮುಖ್ಯಸ್ಥ ಬ್ರಾಡ್ ಮೆಕ್‌ಕೀನ್ ಘಟನೆಯ ಬಗ್ಗೆ ವಿವರಿಸಿದ್ದರು.

ಕೋರಲ್ ಸ್ಪ್ರಿಂಗ್ಸ್ ಪೊಲೀಸರು ತನಿಖೆ ಆರಂಭಿಸಿದ್ದು, ಕೊಲೆಗೆ ಮೆರಿನ್ ಪತಿ ಫಿಲಿಪ್ ಮ್ಯಾಥ್ಯೂ ಕಾರಣ ಎಂದು ತಿಳಿದುಬಂದಿದ್ದು ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.ಮೆರಿನ್‌ ಜಾಯ್‌ ಮತ್ತು ಮ್ಯಾಥ್ಯೂ ನಡುವಿನ ಕುಟುಂಬ ಸಂಬಂಧಿತ ವಿವಾದ ಮೆರಿನ್‌ ಹತ್ಯೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

No Comments

Leave A Comment