Log In
BREAKING NEWS >
ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಿ ‌ಮಂಜುನಾಥ್ ಕೊಳ ಆಯ್ಕೆ....

ಉಡುಪಿಯಲ್ಲಿ 109 ಮಂದಿಗೆ ಕೋವಿಡ್ ಸೋಂಕು ದೃಢ! ಇಬ್ಬರು ಸಾವು

ಉಡುಪಿ : ಜಿಲ್ಲೆಯಲ್ಲಿ ಇಂದು 109 ಹೊಸ ಕೋವಿಡ್ ಪ್ರಕರಣಗಳು ದೃಢ ಪಟ್ಟು ಸೋಂಕಿನಿಂದ ಇಬ್ಬರು ಸಾವನ್ನಪಿದ ವರದಿಯಾಗಿವೆ. ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3721ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ ಉಡುಪಿಯಲ್ಲಿ 36, ಕುಂದಾಪುರ 46, ಕಾರ್ಕಳದಲ್ಲಿ 27 ಪ್ರಕರಣ ಕಂಡುಬಂದಿದೆ. 56 ಮಂದಿ ಪುರುಷರು, 42 ಮಂದಿ ಮಹಿಳೆಯರು, 11 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕುಂದಾಪುರದಿಂದ 34, ಕಾರ್ಕಳದಿಂದ 6, ಟಿಎಂಎ ಪೈ ಆಸ್ಪತ್ರೆಯಿಂದ 15 ಸಹಿತ ಒಟ್ಟು 55 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಮಣಿಪಾಲ ಆಸ್ಪತ್ರೆಯಲ್ಲಿ 60 ವರ್ಷ ಮೇಲ್ಪಟ್ಟ ವಯೋವೃದ್ದರೋರ್ವರು ಕಿಡ್ನಿ, ಜ್ವರ ಲಕ್ಷಣದಿಂದ ಬಳಲುತ್ತಿದ್ದು, ಮಂಗಳವಾರ ಸಾವನ್ನಪ್ಪಿದ್ದಾರೆ. ಇವರ ವೈದ್ಯಕಿಯ ವರದಿ ಪಾಸಿಟಿವ್‌ ಕಂಡುಬಂದಿತ್ತು. ಸೋಮವಾರ ರಾತ್ರಿ ಅಂಬಲಪಾಡಿಯ 60 ವರ್ಷ ಮೇಲ್ಪಟ್ಟ ಮಹಿಳೆಯೋರ್ವರು ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯಕೀಯ ವರದಿಯಲ್ಲಿ ಕೊರೊನಾ ಪಾಸಿಟಿವ್‌ ಕಂಡುಬಂದಿತ್ತು.

No Comments

Leave A Comment