Log In
BREAKING NEWS >
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ; ಮುಖ್ಯ ಆರೋಪಿ ನವೀನ್ ಸೇರಿದಂತೆ 110 ಮಂದಿ ಬಂಧನ...

ಫ್ರಾನ್ಸ್ ನಿಂದ ಭಾರತಕ್ಕೆ 120 ವೆಂಟಿಲೇಟರ್, 50,000 ಕೊವಿಡ್‍ ಪರೀಕ್ಷಾ ಕಿಟ್‌ಗಳ ಕೊಡುಗೆ

ನವದೆಹಲಿ: ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕರೋನಾ ವೈರಸ್ ಪ್ರಕರಣಗಳು ವೇಗವಾಗಿ ಹರಡುವುದನ್ನು ಎದುರಿಸಲು ಫ್ರಾನ್ಸ್ ಸರ್ಕಾರ 120 ವೆಂಟಿಲೇಟರ್ ಗಳು ಮತ್ತು 50,000 ಕೊವಿಡ್‍ -19 ಪರೀಕ್ಷಾ ಕಿಟ್‌ಗಳನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದೆ.

ವೆಂಟಿಲೇಟರ್‌ಗಳು ಮತ್ತು ಟೆಸ್ಟ್ ಕಿಟ್‌ಗಳನ್ನು ಮಂಗಳವಾರ ಭಾರತದಲ್ಲಿನ ಫ್ರಾನ್ಸ್ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಅವರಿಂದ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಮತ್ತು ಐಸಿಎಂಆರ್ ಅಧಿಕಾರಿಗಳು ಸ್ವೀಕರಿಸಿದರು.

‘ಭಾರತಕ್ಕೆ ಫ್ರಾನ್ಸ್ ಪ್ರಮುಖ ಕಾರ್ಯತಂತ್ರದ ಪಾಲುದಾರ ದೇಶಗಳಲ್ಲಿ ಒಂದಾಗಿದ್ದು, ಎರಡೂ ದೇಶಗಳ ಅತ್ಯಂತ ಸ್ನೇಹಪರ ಸಂಬಂಧ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಮತ್ತು ವಿವಿಧ ವಿಷಯಗಳಲ್ಲಿ ನಿಕಟ ಸಹಕಾರ ಹೊಂದುವ ದೃಷ್ಟಿಯಿಂದ ಸಂಕಷ್ಟದ ಸಮಯದಲ್ಲಿ ಸಾಂಕ್ರಾಮಿಕ ರೋಗವನ್ನು ಎದುರಿಸಲು ಫ್ರಾನ್ಸ್‌ಗೆ ಈಗಾಗಲೇ ಜೀವರಕ್ಷಕ ಔಷಧಿಗಳನ್ನು ಪೂರೈಸಲಾಗಿದೆ.’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.

ಕೊರೋನಾ ವೈರಸ್ ಸೋಂಕು ನಿಯಂತ್ರಣ ಮತ್ತು ನಿರ್ಮೂಲನೆಗೆ ಭಾರತ ಮತ್ತು ಫ್ರಾನ್ಸ್ ಒಟ್ಟುಗೂಡಿ ಹೋರಾಟ ನಡೆಸಬೇಕಿದೆ. ಮಹಾಮಾರಿ ವಿರುದ್ಧ ಹೋರಾಟಕ್ಕೆ ಭಾರತದ ಜೊತೆಗೆ ಕೈಜೋಡಿಸಲು ಫ್ರಾನ್ಸ್ ಸದಾ ಸಿದ್ಧವಾಗಿರುತ್ತದೆ. ಅದಕ್ಕೆ ಅಗತ್ಯವಾಗಿರುವ ಮೂಲಸೌಕರ್ಯಗಳ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಫ್ರಾನ್ಸ್ ರಾಯಭಾರಿ ಎಮ್ಯಾನ್ಯುವಲ್ ಲೆನೈನ್ ತಿಳಿಸಿದ್ದಾ

No Comments

Leave A Comment