Log In
BREAKING NEWS >
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ; ಮುಖ್ಯ ಆರೋಪಿ ನವೀನ್ ಸೇರಿದಂತೆ 110 ಮಂದಿ ಬಂಧನ...

ಮಂಗಳೂರು: ಮೀನು ಹಿಡಿಯುವ ದೋಣಿ ಮುಳುಗಡೆ, 6 ಮೀನುಗಾರರು ಪ್ರಾಣಾಪಾಯದಿಂದ ಪಾರು

ಮಂಗಳೂರು: ದೈತ್ಯ ಅಲೆಗಳಿಗೆ ಸಿಕ್ಕ ಮೀನುಗಾರಿಕಾ ದೋಣಿ ಸಮುದ್ರದಲ್ಲಿ ಮುಳುಗಿದ್ದು ದೋಣಿಯಲ್ಲಿದ್ದ ಆರು ಮಂದಿ ಮೀನುಗಾರರು ಅಚ್ಚರಿಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಹಳೆಯಂಗಡಿ ಗ್ರಾಮ ವ್ಯಾಪ್ತಿಯ ಶಿಹಿತ್ಲು ಎಂಬಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಘಟನೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಪ್ರಮೋದ್, ಸುಧಾಕರ್ ಸಾಲಿಯನ್, ಕುಮಾರ್, ಹೇಮಚಂದ್ರ, ಸೋಮನಾಥ್ ಮತ್ತು ಸಿರಾಜ್  ಎನ್ನುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೀನುಗಾರರು, ಹವಾಮಾನದಲ್ಲಿನ ಹಠಾತ್ ಬದಲಾವಣೆಗಳಿಂದಾಗಿ ಬೃಹತ್ ಅಲೆಗಳು ಎದ್ದು ದೋಣಿ ಮುಳುಗಿದಾಗ ಸಂಕಟಕ್ಕೆ ಸಿಕ್ಕಿದ್ದರು.ದೋಣಿ ಅಲುಗಾಡಲು ತೊಡಗಿದಾಗ ರಕ್ಷಣೆಗೆ ಮುಂದಾದ ಅವರು  ಮೂವರು ಮೀನುಗಾರರು ದಡಕ್ಕೆ ಈಜಿ ತಮ್ಮನ್ನು ರಕ್ಷಿಸಿಕೊಂಡರೆ ಇತರರನ್ನು ಅದರ ಸಮೀಪದಲ್ಲಿದ್ದ ದೋಣಿಯಲ್ಲಿನ ಜನರು ರಕ್ಷಿಸಿದ್ದಾರೆ.

ಅದಾಗ್ಯೂ ದೋಣಿ ಅಲೆಗಳ ಹೊಡೆತಕ್ಕೆ ಸಿಕ್ಕು ಮುಳುಗಿದೆ. ಮೀನುಗಾರರಲ್ಲಿ ಕುಮಾರ್ ಎಂಬಾತ ಸ್ವಲ್ಪ ಅನಾರೋಗ್ಯಕ್ಕೆ ಒಳಗಾಗಿದ್ದು ಘಟನೆಯಿಂದ ಸುಮಾರು ಮೂರು ಲಕ್ಷ ರು, ನಷ್ಟವಾಗಿದೆ ಎಂದು ಹೇಳಲಾಗಿದೆ,

No Comments

Leave A Comment