Log In
BREAKING NEWS >
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ; ಮುಖ್ಯ ಆರೋಪಿ ನವೀನ್ ಸೇರಿದಂತೆ 110 ಮಂದಿ ಬಂಧನ...

ಬ್ರಹ್ಮಾವರ: ಮೊಬೈಲ್ ಕಳವು ಉದ್ಯಾವರ ಮೇಲ್ಪೇಟೆ ಆರೋಪಿ ವಶಕ್ಕೆ

ಉಡುಪಿ : ಬ್ರಹ್ಮಾವರದ ಬಳಿಯ ಹಂದಾಡಿ ಗ್ರಾಮದ ಕಲ್ಲಬೆಟ್ಟುನಲ್ಲಿ ಯುವತಿಯೊಬ್ಬಳ ಮೊಬೈಲನ್ನು ಕಸಿದುಕೊಂಡ ಆರೋಪಿಯೋರ್ವನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಉದ್ಯಾವರ ಮೇಲ್ಪೇಟೆ ನಿವಾಸಿ ಮೊಹಮದ್‌ ಫಹಾದ್ ಎಂಬಾತ ಮೇ 27 ರಂದು ಬೆಳಿಗ್ಗೆ ಬ್ರಹ್ಮಾವರ ತಾಲೂಕು ಹಂದಾಡಿ ಗ್ರಾಮದ ಕಲ್ಲಬೆಟ್ಟು ತಿರುವಿನಲ್ಲಿ ರಕ್ಷಾಎಂಬ ಯುವತಿ ಮನೆಯಿಂದ ಮೊಬೈಲ್‌ನಲ್ಲಿ ಮಾತನಾಡುತ್ತಾ ನಡೆದುಕೊಂಡು ಕೆಲಸಕ್ಕೆಂದು ಬ್ರಹ್ಮಾವರ ಪೇಟೆಗೆ ಹೋಗುತ್ತಿರುವಾಗ ಅವರ ಹಿಂಭಾಗದಿಂದ ಅಪರಿಚಿತರಿಬ್ಬರು ಮೋಟಾರ್ ಸೈಕಲ್‌ನಲ್ಲಿ ಬಂದು ರಕ್ಷಾರವರ ಕೈಯಿಂದ ಮೊಬೈಲ್‌ ಕಸಿದು ಪರಾರಿಯಾಗಿದ್ದರು.

ಆರೋಪಿ ಮೊಹಮದ್‌ ಫಹಾದ್‌ ವಿರುದ್ಧ ಈ ಮೊದಲು ಸುಲಿಗೆ, ಗಾಂಜಾ ಸೇವನೆ, ಗಾಂಜಾ ಮಾರಾಟ ಸಹಿತ ಹಲವು ಪ್ರಕರಣಗಳು ದಾಖಲಾಗಿದೆ. ಸುಲಿಗೆಯಾದ ರೆಡ್‌ಮಿ ಮೊಬೈಲ್‌ ಮತ್ತು ಕೃತ್ಯಕ್ಕೆ ಬಳಸಿದ ಒಂದು ಪಲ್ಸರ್‌ ಬೈಕ್‌ ಸೇರಿ ಒಟ್ಟು ರೂ. 70,000/- ಮೌಲ್ಯದ ಸ್ವತ್ತುಗಳನ್ನು ಸ್ವಾಧೀಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್‌ ಚಂದ್ರ ಮತ್ತು ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಟಿ. ಜೈಶಂಕರ್‌, ಬ್ರಹ್ಮಾವರ ವೃತ್ತದ ಸಿ.ಪಿ.ಐ. ಅನಂತ ಪದ್ಮನಾಭ ಮತ್ತು ಬ್ರಹ್ಮಾವರ ಪೊಲೀಸ್‌ ಠಾಣೆಯ ಪಿ.ಎಸ್‌.ಐ. ರಾಘವೇಂದ್ರ, ಸಿಬ್ಬಂದಿಗಳ ತಂಡವು ನಡೆಸಿರುತ್ತದೆ.

No Comments

Leave A Comment