Log In
BREAKING NEWS >
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ; ಮುಖ್ಯ ಆರೋಪಿ ನವೀನ್ ಸೇರಿದಂತೆ 110 ಮಂದಿ ಬಂಧನ...

ವೈಮಾನಿಕ ದಾಳಿ: 45 ಮಂದಿ ಸಾವು ಅ ಅ

ಕಾಬೂಲ್‌: ಅಫ್ಘಾನಿಸ್ಥಾನದ ಪಶ್ಚಿಮ ಭಾಗದಲ್ಲಿರುವ ಹೆರಾತ್‌ ಪ್ರಾಂತ್ಯದಲ್ಲಿ ಸೇನಾಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ 45 ಮಂದಿ ಮೃತಪಟ್ಟಿದ್ದಾರೆ.ಈ ಪೈಕಿ ಎಂಟು ಮಂದಿ ನಾಗರಿಕರೂ ಸೇರಿದ್ದಾರೆ.

ಅದ್ರಾ ಸ್ಕಾನ್‌ ಜಿಲ್ಲೆಯಲ್ಲಿ ತಾಲಿಬಾನ್‌ ಉಗ್ರ ಸಂಘಟನೆಯ ಮಾಜಿ ನಾಯಕ ಕಾರಾಗೃಹದಿಂದ ಬಿಡುಗಡೆಯಾಗಿರುವುದನ್ನು ಸಂಭ್ರಮಿಸಲು ಸಾವಿರಾರು ಮಂದಿ ಸೇರಿರುವಾಗಲೇ ಈ ವೈಮಾನಿಕ ದಾಳಿ ನಡೆದಿದೆ.

ಈ ದಾಳಿಯಲ್ಲಿ ಉಗ್ರ ಸಂಘಟನೆಯ ಕೆಲ ನಾಯಕರು ಜೀವ ಕಳೆದುಕೊಂಡಿದ್ದಾರೆ.

ತಾಲಿಬಾನ್‌ ವಕ್ತಾರ ಕ್ವಾರಿ ಮೊಹಮ್ಮದ್‌ ಯೂಸುಫ್ ಅಹ್ಮದಿ ಹೇಳಿಕೆ ನೀಡಿ, ಎರಡು ವೈಮಾನಿಕ ದಾಳಿ ನಡೆದಿದೆ. ಅದರಲ್ಲಿ ಎಂಟು ಮಂದಿ ನಾಗರಿಕರು ಅಸುನೀಗಿದ್ದಾರೆ.

ಈ ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ ಎಂದಿದ್ದಾನೆ. ನಾಗರಿಕರು ಅಸುನೀಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಫ್ಘಾನಿಸ್ತಾನ ಸರಕಾರ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಕಾಬೂಲ್‌ನಲ್ಲಿರುವ ಅಮೆರಿಕದ ಶಾಂತಿದೂತ ಝಲ್ಮೆ ಖಲಿಝಾದ್‌ ವೈಮಾನಿಕ ದಾಳಿಯನ್ನು ಖಂಡಿಸಿದ್ದಾರೆ.

No Comments

Leave A Comment