Log In
BREAKING NEWS >
ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಿ ‌ಮಂಜುನಾಥ್ ಕೊಳ ಆಯ್ಕೆ....

ತೆಲಂಗಾಣದಲ್ಲಿ ರೈಲು ಹರಿದು ಮೂವರು ರೈಲ್ವೆ ಕಾರ್ಮಿಕರು ಸಾವು

ಹೈದರಾಬಾದ್: ನಗರದ ಹೊರವಲಯದಲ್ಲಿರುವ ವಿಕರಾಬಾದ್ ಜಿಲ್ಲೆಯ ಚಿತ್ತಿಗಡ್ಡ ಪ್ರದೇಶದ ರೈಲ್ವೆ ಸೇತುವೆಯ ಮೇಲೆ ರೈಲು ಹರಿದು ಮೂವರು ರೈಲ್ವೆ ಇಲಾಖೆ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ರೈಲ್ವೆ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮೃತ ಕಾರ್ಮಿಕರನ್ನು ಹೈದರಾಬಾದ್‌ನ ಎನ್ ಪ್ರತಾಪ್ ರೆಡ್ಡಿ(56), ಡಿ ನವೀನ್ ಕುಮಾರ್ (35) ಮತ್ತು ಬಿಹಾರ ಮೂಲದ ಶಮ್‌ಶೀರ್ ಅಲಿ (25) ಎಂದು ಗುರುತಿಸಲಾಗಿದೆ ಎಂದು ವಿಕರಾಬಾದ್ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಬುಧವಾರ ಮಧ್ಯಾಹ್ನ ಕಾರ್ಮಿಕರು ಸೇತುವೆಗೆ ಬಣ್ಣಬಳಿಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಈ ಸಂಬಂಧ ವಿಕರಾಬಾದ್ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕರಾಬಾದ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

No Comments

Leave A Comment