Log In
BREAKING NEWS >
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ; ಮುಖ್ಯ ಆರೋಪಿ ನವೀನ್ ಸೇರಿದಂತೆ 110 ಮಂದಿ ಬಂಧನ...

ಮೊದಲ ಬಾರಿಗೆ 50 ಸಾವಿರ ಗಡಿ ದಾಟಿದ ಬಂಗಾರದ ಬೆಲೆ!

ಮುಂಬಯಿ: ಜಾಗತಿಕವಾಗಿ ಉಲ್ಬಣಿಸಿರುವ ಕೊರೊನ ಸೋಂಕು ಮತ್ತು ಚೀನಾ – ಅಮೆರಿಕ ಟ್ರೇಡ್‌ ವಾರ್‌ ಪರಿಣಾಮವಾಗಿ ಅಮೂಲ್ಯ ಲೋಹಗಳಾದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಾಖಲೆಯ ಏರಿಕೆ ಕಂಡಿವೆ.

ಬುಧವಾರ ಬೆಳಗಿನ ವಹಿವಾಟಿನಲ್ಲಿ ಚಿನ್ನದ ಮೇಲೆ ಹೂಡಿಕೆಗೆ ಅತಿ ಹೆಚ್ಚು ಬೇಡಿಕೆ ಕಂಡುಬಂತು. ಇದರ ಪರಿಣಾಮವಾಗಿ ‘ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ ಆಪ್‌ ಇಂಡಿಯಾ ಲಿ.’ (ಎಂಸಿಎಕ್ಸ್‌) ನಲ್ಲಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಬರೋಬ್ಬರಿ 50,020 ರೂಪಾಯಿಗೆ ಜಿಗಿದಿದೆ. ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 50 ಸಾವಿರ ಗಡಿ ದಾಟಿರುವುದು ಇದೇ ಮೊದಲು.

ಇದರಲ್ಲಿ ಅಮೆರಿಕದ ಹೂಡಿಕೆಯೇ ಚಿನ್ನದ ಬೆಲೆ ಏರಿಕೆಗೆ ಪ್ರಚೋದನೆ ನೀಡಿದೆ. ಇತ್ತೀಚಿಗೆ ಡಾಲರ್‌ ಮೌಲ್ಯದಲ್ಲಿ ಕೊಂಚ ಇಳಿಕೆಯಾಗಿರುವ ಕಾರಣ, ಅಮೆರಿಕ ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದಾಗಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವುದರಿಂದ ಡಾಲರ್‌ ಮೌಲ್ಯದಲ್ಲಿ ಸ್ಥಿರತೆ ಕಾಪಾಡುವುದು ಅಮೆರಿಕದ ಉದ್ದೇಶ ಎಂದು ಆಕ್ಸಿಸ್ ಸೆಕ್ಯುರಿಟೀಸ್‌ನ ತಾಂತ್ರಿಕ ಮುಖ್ಯಸ್ಥ ರಾಜೇಶ್ ಪಾಲ್ವಿಯಾ ಹೇಳಿದರು.

No Comments

Leave A Comment