Log In
BREAKING NEWS >
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ; ಮುಖ್ಯ ಆರೋಪಿ ನವೀನ್ ಸೇರಿದಂತೆ 110 ಮಂದಿ ಬಂಧನ...

ಕೋವಿಡ್ 19ನಿಂದ ತಿರುಮಲ ತಿರುಪತಿ ದೇವಳದ ಮಾಜಿ ಪ್ರಧಾನ ಅರ್ಚಕ ಸಾವು

ಹೈದರಾಬಾದ್:ಪುರಾಣ ಪ್ರಸಿದ್ಧ ತಿರುಮಲ ತಿರುಪತಿ ಶ್ರೀವೆಂಕಟರಮಣಸ್ವಾಮಿ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕರಲ್ಲೊಬ್ಬರಾದ ಪೆದ್ದಿಂಟಿ ಶ್ರೀನಿವಾಸಮೂರ್ತಿ ದೀಕ್ಷಿತುಲು(80ವರ್ಷ) ಅವರು ಸೋಮವಾರ ಕೋವಿಡ್ 19 ಚಿಕಿತ್ಸೆ ಫಲಕಾರಿಯಾಗದೆ ತಿರುಪತಿ ಎಸ್ ವಿಐಎಂಎಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ.

ಕಳೆದ ಮೂರು ದಶಕಗಳಿಂದ ತಿರುಪತಿ ಬಾಲಾಜಿಗೆ ವಂಶಪಾರಂಪರ್ಯವಾಗಿ ನಾಲ್ಕು ಕುಟುಂಬಸ್ಥರಾದ 1)ಗೋಲ್ಲಾಪಲ್ಲಿ 2)ಪೈದಿಪಲ್ಲಿ 3)ತಿರುಪತಮ್ಮಾ 4)ಪೆದ್ದಿಂಟಿ ಕುಟುಂಬಸ್ಥರು ಪುರೋಹಿತರಾಗಿ ಪೂಜೆ ನೆರವೇರಿಸುತ್ತಿದ್ದರು. ಇದರಲ್ಲಿ ದೀಕ್ಷಿತುಲುಜೀ ಕೂಡಾ ಪೆದ್ದಿಂಟಿಯ ಪ್ರತಿನಿಧಿಯಾಗಿದ್ದಾರೆ ಎಂದು ವರದಿ ವಿವರಿಸಿದೆ.

ಶ್ರೀನಿವಾಸಮೂರ್ತಿ ಅವರು ಬ್ರಹ್ಮೋತ್ಸವ ಕಾನ್ಕಾನಾ ಭಟ್ಟರ್ ಸೇವೆ ಸಲ್ಲಿಸಿದ್ದರು.(ಪವಿತ್ರ ಜನಿವಾರ ಧರಿಸಿ 9 ದಿನಗಳ ಕಾಲ ನಡೆಯುವ ವಾರ್ಷಿಕ ಉತ್ಸವದ ಪೂಜೆ) ಅಲ್ಲದೇ ವೆಂಕಟೇಶ್ವರನಿಗೆ ಜಲಾಭಿಷೇಕ ಮಾಡುವುದು ಕೂಡಾ ಸೇರಿದೆ. ದೀಕ್ಷಿತುಲುಜೀ ಅವರು ವೈಖಾನ ಆಗಮ ಸಂಪ್ರದಾಯಸ್ಥರು. ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿಗೆ ಈ ಸಂಪ್ರದಾಯದ ಪುರೋಹಿತರು ಮಾತ್ರವೇ ಪೂಜೆ ಸಲ್ಲಿಸಲು ಅರ್ಹತೆ ಪಡೆದಿರುತ್ತಾರೆ ಎಂದು ವರದಿ ವಿವರಿಸಿದೆ.

ಕೋವಿಡ್ 19 ವೈರಸ್ ನಿಂದ ವಿಧಿವಶರಾದ ಹಿನ್ನೆಲೆಯಲ್ಲಿ ದೀಕ್ಷಿತುಲು ಅವರ ಶವವನ್ನು ಕೂಡಾ ಕುಟುಂಬಸ್ಥರಿಗೆ ಹಸ್ತಾಂತರಿಸಿಲ್ಲ ಎಂದು ಮೂಲಗಳು ತಿಳಿಸಿವೆ. ದೀಕ್ಷಿತುಲುಜೀ ನಿಧನಕ್ಕೆ ಟಿಟಿಡಿ ಟ್ರಸ್ಟ್ ನ ಮಾಜಿ ಅಧ್ಯಕ್ಷ ಬಿ.ಕರುಣಾಕರ ರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

No Comments

Leave A Comment