Log In
BREAKING NEWS >
ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಉಡುಪಿ:ದ್ವಿತೀಯ ಪಿಯುಸಿ ಫಲಿತಾಂಶ ವಿದ್ಯೋದಯ ಪಪೂ ಕಾಲೇಜಿನ ಅಭಿಜ್ಞಾ ವಿಜ್ಞಾನದಲ್ಲಿ ಪ್ರಥಮ/PU results: Udupi girl Abhijna Rao is state Science topper

ಉಡುಪಿ: ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು ಈ ಬಾರಿಯೂ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಗಮನಾರ್ಹವಾಗಿ 6 ಪ್ರಮುಖ ರ್ಯಾಂಕ್ ಗಳನ್ನು ಜಿಲ್ಲೆಯ ವಿದ್ಯಾರ್ಥಿನಿಯರು ಪಡೆದುಕೊಂಡಿದ್ದು ಹೆಮ್ಮೆಯ ವಿಚಾರವಾಗಿದೆ.

ವಿದ್ಯೋದಯ ಪಪೂ ಕಾಲೇಜಿನ  ವಿದ್ಯಾರ್ಥಿನಿ ಅಭಿಜ್ಞಾ ರಾವ್ ಪಿಯುಸಿ ವಿಜ್ಞಾನ ವಿಭಾಗದಲ್ಲಿ 596 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ, ಇವರು ವಿಠ್ಠಲ್ ರಾವ್ ಮತ್ತು ಆಶಾ ರಾವ್ ಅವರ ಪುತ್ರಿಯಾಗಿದ್ದು  ಪಿಸಿಎಂಸಿ ಹಾಗೂ ಸಂಸ್ಕೃತದಲ್ಲಿ 100 ಅಂಕ ಹಾಗೂ ಇಂಗ್ಲೀಷ್ ನಲ್ಲಿ 96 ಅಂಕ ಪಡೆದಿದ್ದಾರೆ.

ವಿದ್ಯೋದಯ ಪಪೂ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ, ಕರುಣಾಕರ್ ಮತ್ತು ಚಂದ್ರಿಕಾ ಅವರ ಪುತ್ರಿಯಾಗಿರುವ ಗ್ರೀಷ್ಮಾ ಕೆ. ವಿಜ್ಞಾನ ವಿಭಾಗದಲ್ಲಿ 593 ಅಂಕಗಳನ್ನು ಪಡೆದಿದ್ದು ರಾಜ್ಯದಲ್ಲಿ 4ನೇ ಸ್ಥಾನಿಯಾಗಿದ್ದಾರೆ.

ಮಹಾತ್ಮ ಗಾಂಧೀಜಿ ಮೆಮೋರಿಯಲ್ ಕಾಲೇಜು ಉಡುಪಿ, ಇಲ್ಲಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ  ಮೇಧಾ ಎನ್ ಭಟ್ ಕೂಡ 593 ಅಂಕ ಪಡೆದು ರಾಜ್ಯದಲ್ಲಿ  4 ಸ್ಥಾನ ಗಳಿಸಿಕೊಂಡಿದ್ದಾರೆ. ಇವರು ನರಸಿಂಹ ಭಟ್ ಹಾಗೂ ಶಶಿಕಲಾ ಭಟ್ ಅವರ ಪುತ್ರಿ.

ವಿದ್ಯೋದಯ ಪಪೂ ಕಾಲೇಜಿನ ಪದ್ಮಿಕಾ ಕೆ ಶೆಟ್ಟಿ ಕೂಡ ವಾಣಿಜ್ಯ ವಿಭಾಗದಲ್ಲಿ 592 ಅಂಕ ಪಡೆದು  5ನೇ ಸ್ಥಾನ ಗಳಿಸಿ ಕೀರ್ತಿ ಪಡೆದಿದ್ದಾರೆ.  ಇವರು ಕುಶಾಲ ಶೆಟ್ಟಿ ಮತ್ತು ನಿಶ್ಚಲ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಸುಧೀರ್ ಕಾಮತ್ ಮತ್ತು ಗೀತಾ ಕಾಮತ್ ದಂಪತಿಯ ಪುತ್ರಿಯಾಗಿರುವ ರಿತಿಕಾ ಕಾಮತ್ 594 ಅಂಕ ಪಡೆದಿದ್ದಾರೆ. ಇವರು ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನಿ ವಿದ್ಯಾರ್ಥಿನಿ.

ಶ್ರೀ ವೆಂಕಟರಮಣ ಪಿಯು ಕಾಲೇಜು ಕುಂದಾಪುರ, ಇಲ್ಲಿನ ವಿದ್ಯಾರ್ಥಿನಿ ಸ್ವಾತಿ ಪೈ  ವಾಣಿಜ್ಯ ವಿಭಾಗದಲ್ಲಿ 594 ಅಂಕ ರಾಜ್ಯಕ್ಕೆ 4ನೇ ಸ್ಥಾನಿಯಾಗಿದ್ದಾರೆ. ಇವರು ಶಿವಾನಂದ ಪೈ ಮತ್ತು ಶಿಲ್ಪ ಪೈ ದಂಪತಿಯ ಪುತ್ರಿಯಾಗಿದ್ದಾರೆ.

ರಾಜ್ಯ ಮಟ್ಟದಲ್ಲಿ ವಿದ್ಯೋದಯದ ಅಪೂರ್ವ ಸಾಧನೆ
ಉಡುಪಿ ವಿದ್ಯೋದಯ ಟ್ರಸ್ಟ್‍ನ ಅಂಗ ಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜು 2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ರ ಫಲಿತಾಂಶಗಳಿಸಿದ್ದು ಮಾತ್ರವಲ್ಲದೆ ರಾಜ್ಯಕ್ಕೆ ವಿಜ್ಞಾನ ವಿಭಾಗದಲ್ಲಿ ಮೊದಲ ರ್ಯಾಂಕನ್ನು ಹಾಗೆಯೇ 4ನೇ, 5ನೇ ಮತ್ತು 9ನೇ ರ್ಯಾಂಕನ್ನು ಗಳಿಸಿರುತ್ತದೆ.

ವಿಜ್ಞಾನ ವಿಭಾಗದಲ್ಲಿ
ಅಭಿಜ್ಞಾ ರಾವ್ : ಇಂಗ್ಲೀಷ್‍ನಲ್ಲಿ 96, ಸಂಸ್ಕøತದಲ್ಲಿ 100, ಭೌತಶಾಸ್ತ್ರದಲ್ಲಿ 100, ರಸಾಯನಶಾಸ್ತ್ರದಲ್ಲಿ 100, ಗಣಿತ ಶಾಸ್ತ್ರದಲ್ಲಿ 100, ಗಣಕಶಾಸ್ತ್ರದಲ್ಲಿ 100 ಅಂಕ ಗಳಿಸುವ ಮೂಲಕ ಒಟ್ಟು 596 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮಳಾಗಿರುತ್ತಾಳೆ.

ಗ್ರೀಷ್ಮಾ : ಇಂಗ್ಲೀಷ್‍ನಲ್ಲಿ 98, ಹಿಂದಿಯಲ್ಲಿ 95, ಭೌತಶಾಸ್ತ್ರದಲ್ಲಿ 100, ರಸಾಯನ ಶಾಸ್ತ್ರದಲ್ಲಿ 100, ಗಣಿತಶಾಸ್ತ್ರದಲ್ಲಿ 100, ಜೀವಶಾಸ್ತ್ರದಲ್ಲಿ 100 ಅಂಕ ಗಳಿಸಿ, ಒಟ್ಟು 593 ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ಸ್ಥಾನವನ್ನು ಗಳಿಸಿರುತ್ತಾಳೆ.

ಪದ್ಮಿಕಾ ಕೆ. ಶೆಟ್ಟಿ : ಇಂಗ್ಲೀಷ್‍ನಲ್ಲಿ 97, ಹಿಂದಿ 98, ಭೌತಶಾಸ್ತ್ರದಲ್ಲಿ 99, ರಸಾಯನ ಶಾಸ್ತ್ರದಲ್ಲಿ 98, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರದಲ್ಲಿ 100 ಅಂಕಗಳೊಂದಿಗೆ ಒಟ್ಟು 592 ಅಂಕವನ್ನು ಗಳಿಸಿ ರಾಜ್ಯಕ್ಕೆ 5ನೇ ರ್ಯಾಂಕನ್ನು ಗಳಿಸಿರುತ್ತಾಳೆ.

ಮೈಥಿಲಿ ಪದವು : ಇಂಗ್ಲೀಷ್‍ನಲ್ಲಿ 95, ಹಿಂದಿ 98, ಭೌತಶಾಸ್ತ್ರದಲ್ಲಿ 97, ರಸಾಯನ ಶಾಸ್ತ್ರದಲ್ಲಿ 98, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರಗಳಲ್ಲಿ 100 ಅಂಕಗಳೊಂದಿಗೆ ಒಟ್ಟು 588 ಅಂಕವನ್ನು ಗಳಿಸಿ ರಾಜ್ಯಕ್ಕೆ 9ನೇ ರ್ಯಾಂಕನ್ನು ಗಳಿಸಿರುತ್ತಾಳೆ.

ವಾಣಿಜ್ಯ ವಿಭಾಗದಲ್ಲಿ
ಅಯೋನಾ ಲೆವಿಸ್ : ಇಂಗ್ಲೀಷ್ 93, ಹಿಂದಿ 97, ವ್ಯವಹಾರ ಅಧ್ಯಯನ 100, ಲೆಕ್ಕಶಾಸ್ತ್ರದಲ್ಲಿ 100, ಸಂಖ್ಯಾಶಾಸ್ತ್ರದಲ್ಲಿ 100, ಮೂಲಗಣಿತದಲ್ಲಿ 99 ಅಂಕವನ್ನು ಗಳಿಸಿ ಒಟ್ಟು 589 ಅಂಕಗಳೊಂದಿಗೆ ರಾಜ್ಯಕ್ಕೆ 9ನೇ ರ್ಯಾಂಕ್ ಗಳಿಸಿರುತ್ತಾರೆ ಎಂದು ಪ್ರಾಂಶುಪಾಲರಾದ ಶ್ರೀ.ಎ.ಎಲ್. ಛಾತ್ರ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಕಾಲೇಜು ಆಡಳಿತ ಮಂಡಳಿ, ಪಾಂಶುಪಾಲರು, ಉಪನ್ಯಾಸಕ ವರ್ಗ ಅಪೂರ್ವ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.

PU results: Udupi girl Abhijna Rao is state Science topper

Udupi, Jul 14: Abhijna Rao has emerged as the topper in the state in science. Also, two more students Grishma and Padmika secured 4th and 5th state ranks resoectively in Science from Vidyodaya PU College.

She secured 596 marks in the PUC final examination results announced on Tuesday July 14. She has secured 96 marks in English and 100 marks in PCMC subjects.

Abhijna had secured second position in the state in the SSLC final examinations two years ago.

She is daughter of Asha Rao and Vittal Rao, a retired professor. Her sister Raksha Rao has completed Engineering from NITK Suratkal.

Speaking to Daijiworld, she said, “I had secured second rank in the state in my SSLC examinations, so I had a target to score more in my PUC examinations. My parents and lecturers have supported me in my studies. I am happy today. I have worked hard for this. All my teachers have taught me very well. They gave me proper guidance. Vidyodaya College has always supported me. Preparing for the exams, I was studying on a daily basis. The exams were easy and I had expected to score above 590. I am very happy to score 596.”

Mother Asha Rao, “She worked really hard for her examination. I was expecting her to secure third rank, but she topped the state. I am so happy and proud of my daughter. She took it as a challenge in SSLC to bag a state rank and she has achieved it today. She prefers engineering specializing in Computer Science and is preparing for her CET and JEE exams.”

Padmika (left) and Greeshma

The other two toppers, Grishma scored 593 marks and 4th rank in state with 98 in English, 95 in Hindi and 100 in PCMB, and Padmika scored 592 marks and 5th rank in state with 97 in English, 98 in Hindi, 99 in Physics, 98 in Chemistry and 100 each in Mathematics and Biology.

DDPU Bhagavantha Kattimani sharing his opinion on PU results in the district said, “Udupi stands first in the state as usual. I am very happy to hear the result. I would like to congratulate all students and teachers, who have put sincere effort amidst coronavirus pandemic. The district administration had taken all necessary measures on time. All teachers, college principals, the education department, parents and students supported as well. As Udupi is an educational hub, students are aware about the growing coronavirus issue. They took care of themselves. All three types of institutions in Udupi – aided, non-aided and government colleges, have worked hard.”

No Comments

Leave A Comment