Log In
BREAKING NEWS >
ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಭದ್ರತಾ ಸಿಬ್ಬಂದಿಗೆ ಕೊರೋನಾ: ಬಾಲಿವುಡ್ ನಟಿ ರೇಖಾ ಮನೆ ಸೀಲ್’ಡೌನ್

ಮುಂಬೈ: ಭದ್ರತಾ ಸಿಬ್ಬಂದಿಗೆ ಕೊರೋನಾ ವೈರಸ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ರೇಖಾ ಅವರ ಮನೆಯನ್ನು ಸೀಲ್’ಡೌನ್ ಮಾಡಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಬಾಲಿವುಡ್ ನಟ ಅಮೀರ್ ಖಾನ್, ನಿರ್ದೇಶಕ ಕರಣ್ ಜೋಹನ್ ಅವರ ಭದ್ರತಾ ಸಿಬ್ಬಂದಿಗಳಲ್ಲಿ ಈ ಹಿಂದೆ  ಕೊರೋನಾ ಸೋಂಕು ದೃಢಪಟ್ಟಿತ್ತು. ಇದೀಗ ನಟಿ ರೇಖಾ ಅವರ ಭದ್ರತಾ ಸಿಬ್ಬಂದಿಯಲ್ಲೂ ಕೊರೋನಾ ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ರೇಖಾ ಅವರು ಇರುವ ಬಂಗಲೆಯನ್ನು ಮುಂಬೈ ಮಹಾನಗರ ಪಾಲಿಕೆ ಸೀಲ್’ಡೌನ್ ಮಾಡಿದೆ ಎಂದು ತಿಳಿದುಬಂದಿದೆ. ಇನ್ನು ರೇಖಾ ಅವರೂ ಕೂಡ ಸ್ವಯಂ ಕ್ವಾರಂಟೈನ್’ಗೆ ಒಳಗಾಗಿದ್ದಾರೆಂದು ವರದಿಗಳು ತಿಳಿಸಿವೆ.

No Comments

Leave A Comment