Log In
BREAKING NEWS >
ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಕಾರ್ಕಳ: ಆಭರಣ ಪೆಟ್ಟಿಗೆ ತಯಾರಿಕಾ ಘಟಕದಲ್ಲಿ ಆಕಸ್ಮಿಕ ಬೆಂಕಿ, 15 ಲಕ್ಷ ರು. ಸ್ವತ್ತು ನಷ್ಟ

ಕಾರ್ಕಳ: ಆಭರಣ ಪೆಟ್ಟಿಗೆ ತಯಾರಿಕಾ ಘಟಕದಲ್ಲಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದ ಪರಿಣಾಮ ಲಕ್ಷಾಂತರ ರು. ನಷ್ಟವಾಗಿರುವ ಘಟನೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ನಡೆದಿದೆ.

ಕಾರ್ಕಳದ ಮುಂಡ್ಕೂರಿನಲ್ಲಿ ಇರುವ ಆಭರಣ ಪೆಟ್ಟಿಗೆ ತಯಾರಿಕೆ ಘಟಕದಲ್ಲಿ ಅನಾಹುತ ಸಂಭವಿಸಿದ್ದು ಗ್ರಾಮದ ಸುಧೀರ್ ಶೆಣೈಗೆ ಸೇರಿದ  ಘಟಕವಿದಾಗಿದೆ. ಲಾಕ್ ಡೌನ್ ಕಾರಣದಿಂದ  ಮಾರಾಟಮ್ವಾಗದೇ ಉಳಿದಿದ್ದ ಸಿದ್ಧ ವಸ್ತುಗಳು, ಕಚ್ಚಾ ವಸ್ತುಗಳು ಸೇರಿ ಕಂಪ್ಯೂಟರ್ ಗಳು ಸುಟ್ಟು ಕರಕಲಾಗಿದೆ. ಘಟನೆಯಿಂದ ಸರಿ ಸುಮಾರು 15 ಲಕ್ಷ ರು, ನಷ್ಟವಾಗಿದೆ  ಎಂದು ಅಂದಾಜಿಸಲಾಗಿದೆ.

ಶುಕ್ರವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.

No Comments

Leave A Comment