Log In
BREAKING NEWS >
ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಮುಂದಿನ ವರ್ಷದ ಜೂನ್ ವರೆಗೂ ಏಷ್ಯಾ ಕಪ್ ಮುಂದೂಡಿಕೆ

ನವದೆಹಲಿ: ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ಸೆಪ್ಟೆಂಬರ್ ನಲ್ಲಿ  ನಡೆಯಬೇಕಾಗಿದ್ದ ಏಷ್ಯಾ ಕಪ್ ಟೂರ್ನಿಯನ್ನು ಮುಂದಿನ ವರ್ಷದ ಜೂನ್ ಗೆ ಏಷ್ಯಾ ಕ್ರಿಕೆಟ್ ಸಮಿತಿ ಮುಂದೂಡಿದೆ.

ಈ ನಿರ್ಧಾರದಿಂದಾಗಿ ಸೆಪ್ಟೆಂಬರ್ ನಿಂದ ನವೆಂಬರ್ ವರೆಗೂ ಐಪಿಎಲ್ ನಡೆಸಲು ಪ್ರಯತ್ನಿಸುತ್ತಿರುವ ಸಂಘಟಕರಿಗೆ ಹಾದಿ ಸುಗಮವಾದಂತಾಗಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಭಾವವನ್ನು ಎಚ್ಚರಿಕೆಯಿಂದ ಪರಿಗಣಿಸಿ ಎಸಿಸಿ ಕಾರ್ಯಕಾರಿ ಮಂಡಳಿ ಸೆಪ್ಟೆಂಬರ್ ನಲ್ಲಿ ನಡೆಯಬೇಕಾಗಿದ್ದ ಏಷ್ಯಾ ಕಪ್ ಪಂದ್ಯಾವಳಿಯವನ್ನು ಮುಂದೂಡಲು ನಿರ್ಧರಿಸಿದೆ ಎಂದು ಏಷ್ಯನ್ ಕ್ರಿಕೆಟ್ ಸಮಿತಿ ಟ್ವೀಟ್ ಮಾಡಿದೆ.

ಈ ಬಾರಿ ಪಾಕಿಸ್ತಾನ ಏಷ್ಯಾ ಕಪ್ ಅತಿಥ್ಯ ವಹಿಸಬೇಕಾಗಿತ್ತು. ಆದರೆ, ಭದ್ರತೆ ಕಾರಣ ಶ್ರೀಲಂಕಾದಲ್ಲಿ ಪಂದ್ಯಾವಳಿ ಆಯೋಜಿಸಲು ಸಿದ್ಧತೆ ನಡೆಸಲಾಗಿತ್ತು.

No Comments

Leave A Comment