Log In
BREAKING NEWS >
ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಕೊನೆಗೂ ಸಿಕ್ಕಿ ಬಿದ್ದ ಎಂಟು ಕಾನ್ಪುರ ಪೊಲೀಸರ ಹತ್ಯೆ ಆರೋಪಿ ವಿಕಾಸ್ ದುಬೆ!

ಭೋಪಾಲ್: ಕಳೆದ ವಾರ ತನ್ನನ್ನು ಬಂಧಿಸಲು ಬಂದಿದ್ದ ಎಂಟು ಮಂದಿ ಕಾನ್ಪುರ ಪೊಲೀಸರನ್ನು ಹತ್ಯೆಗೈದು ಪರಾರಿಯಾಗಿದ್ದ ಕುಖ್ಯಾತ ಆರೋಪಿ ವಿಕಾಸ್ ದುಬೆ ಇಂದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಮಧ್ಯಪ್ರದೇಶದ ಉಜ್ಜಯನಿಯಲ್ಲಿ ವಿಕಾಸ್ ದುಬೆಯನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶ ಪೊಲೀಸರು ತನ್ನನ್ನು ಎನ್ ಕೌಂಟರ್ ಮಾಡಬಹುದು ಎಂಬ ಭಯದಿಂದ ವಿಕಾಸ್ ದುಬೆ ಮಧ್ಯಪ್ರದೇಶಕ್ಕೆ ಬಂದಿದ್ದ ಎನ್ನಲಾಗಿದೆ. ಉಜ್ಜಯನಿಗೆ ಬಂದ ನಂತರ ಪೊಲೀಸರಿಗೆ ತನ್ನ ಇರುವಿಕೆಯ ಮಾಹಿತಿ ನೀಡಿದ್ದ, ಪೊಲೀಸರು ಬರುತ್ತಿದ್ದಂತೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ. ಸದ್ಯ ಮಧ್ಯಪ್ರದೇಶ ಪೊಲೀಸರು ದುಬೆಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ ನಂತರ ಆತನನ್ನು ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಲಾಗುವುದು.

ಕೊಲೆ ಬೆದರಿಕೆ ಆರೋಪದ ಹಿನ್ನಲೆಯಲ್ಲಿ ವಿಕಾಸ್ ದುಬೆಯನ್ನು ಬಂಧಿಸಲು ಹೊರಟಿದ್ದ ಪೊಲೀಸ್ ತಂಡದ ಮೇಲೆ ದುಬೆ ಸಹಚರರು ಗುಂಡಿನ ದಾಳಿ ನಡೆಸಿದ್ದರು. ಕಾನ್ಪುರದ ಚೌಬೆಪುರ್ ದಲ್ಲಿ ನಡೆದ ಈ ದಾಳಿಯಲ್ಲಿ ಎಂಟು ಪೊಲೀಸರು ಹತ್ಯೆಯಾಗಿದ್ದರು. ನಂತರ ವಿಕಾಸ್ ದುಬೆ ಪರಾರಿಯಾಗಿದ್ದ.

ಇದನ್ನೂ ಓದಿ: ಕಾನ್ಪುರ ಎನ್ ಕೌಂಟರ್: ವಿಕಾಸ್ ದುಬೆಯ ಮತ್ತಿಬ್ಬರು ಸಹಚರರನ್ನು ಹತ್ಯೆಗೈದ ಪೊಲೀಸ್ ಪಡೆ

ಸುಮಾರು 60ಕ್ಕೂ ಹೆಚ್ಚು ಕೊಲೆ- ದರೋಡೆ ಪ್ರಕರಣಗಳ ಆರೋಪಿಯನ್ನು ಹಿಡಿಯಲು ಉತ್ತರ ಪ್ರದೇಶ ಪೊಲೀಸರು ಜಾಲ ಬೀಸಿದ್ದರು. ಈತನ ಫರಿದಾಬಾಸ್ ಅಡಗುತಾಣಕ್ಕೆ ದಾಳಿ ನಡೆಸಿದಾಗ ದುಬೆ ತಪ್ಪಿಸಿಕೊಂಡಿದ್ದ. ಆತನ ಮೂವರು ಸಹಚರರನ್ನು ಸೆರೆ ಹಿಡಿಯಲಾಗಿತ್ತು.

ಗುರುವಾರ ಬೆಳಿಗ್ಗೆ ವಿಕಾಸ್ ದುಬೆಯ ಇಬ್ಬರು ಸಹಚರರನ್ನು ಎನ್ ಕೌಂಟರ್ ಮಾಡಲಾಗಿತ್ತು. ಬುಧವಾರ ವಿಕಾಸ್ ದುಬೆಯ ಆತ್ಮೀಯ ಅಮರ್ ದುಬೆಯನ್ನು ಹರ್ಮಿಪುರ್ ಬಳಿ ಎನ್ಕ ಕೌಂಟರ್ ಮಾಡಿ ಹತ್ಯೆ ಮಾಡಲಾಗಿತ್ತು. ಸಹಚರರ ಎನ್ ಕೌಂಟರ್ ಪ್ರಕರಣಗಳ ಸುದ್ದಿ ಕೇಳಿ ತಾನೂ ಎನ್ ಕೌಂಟರ್ ಆಗುವ ಭಯದಿಂದ ದುಬೆ ಪೊಲೀಸರಿಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.

No Comments

Leave A Comment