Log In
BREAKING NEWS >
ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಶಾಲೆ ತೆರೆಯದಿದ್ದರೆ ಅನುದಾನ ಕಟ್: ಹಠ ಬಿಡದ ಟ್ರಂಪ್ ಖಡಕ್ ಎಚ್ಚರಿಕೆ

ವಾಷಿಂಗ್ಟನ್: ಅಮೆರಿಕದಲ್ಲಿ ದಿನೆ ದಿನೇ ಕೊರೋನ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಶಾಲೆಗಳನ್ನು ತೆರೆಯುವಂತೆ ಶ್ವೇತಭವನ ರಾಜ್ಯಗಳನ್ನು ಒತ್ತಾಯಿಸುತ್ತಿದೆ.

ದೇಶದಲ್ಲಿ ಕೊರೋನ ಪ್ರಕರಣಗಳು ಸಂಖ್ಯೆ 3 ಮಿಲಿಯನ್ ದಾಟಿ, ಈವರೆಗೆ 1ಲಕ್ಷ 32ಸಾವಿರ ಜನರು ಮೃತಪಟ್ಟಿದ್ದರೂ ಹಠ ಬಿಡುತ್ತಿಲ್ಲ,.ಶಾಲೆಗಳು ವೈಯಕ್ತಿಕವಾಗಿ ಕಲಿಯುವುದನ್ನು ಪುನರಾರಂಭಿಸದಿದ್ದರೆ ಶಾಲೆಗಳಿಗೆ ನೀಡುವ ಕೇಂದ್ರದ ಅನುದಾನ ಕಡಿತಗೊಳಿಸುವುದಾಗಿಯೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಟ್ವೀಟ್‌ ಮೂಲಕ ಬೆದರಿಕೆ ಹಾಕಿದ್ದಾರೆ.

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳನ್ನು (ಸಿಡಿಸಿ) “ಅವರ ಕಠಿಣ ಮಾರ್ಗಸೂಚಿಗಳನ್ನು ಅವರು ಟೀಕಿಸಿದ್ದಾರೆ. ನಂತರ ನಡೆದ ಶ್ವೇತಭವನದ ಕೊರೋನಾವೈರಸ್ಕಾರ್ಯಪಡೆಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ , ಉಪಾಧ್ಯಕ್ಷ ಮೈಕ್ ಪೆನ್ಸ್ ಮುಂದಿನ ವಾರ ಶಾಲೆಗಳನ್ನು ಪುನಃ ತೆರೆಯುವ ಬಗ್ಗೆ ಸಿಡಿಸಿ ಹೊಸ ಮಾರ್ಗದರ್ಶನ ನೀಡಲಿದೆ ಎಂದು ಹೇಳಿದರು.

ಶಾಲೆಗಳು ತೆರೆಯದಿರಲು ಸಿಡಿಸಿಯ ಕಠಿಣ ಮಾರ್ಗದರ್ಶನಗಳು ಸಹ ಕಾರಣವಾಗಿದೆ ಎಂದು ಅವರು ಹೇಳಿದರು. ಮಂಗಳವಾರ, ಸರ್ಕಾರಿ ಅಧಿಕಾರಿಗಳು ಮತ್ತು ಶಾಲಾ ಆಡಳಿತಾಧಿಕಾರಿಗಳೊಂದಿಗಿನ ಶ್ವೇತಭವನದ ಸಭೆಯಲ್ಲಿ ಟ್ರಂಪ್ “ನಾವು ಶಾಲೆಗಳನ್ನು ತೆರೆಯಲು ರಾಜ್ಯಪಾಲರು ಮತ್ತು ಎಲ್ಲರ ಮೇಲೆ ಒತ್ತಡ ಹೇರಲಿದ್ದೇವೆ ಎಂದು ಹೇಳಿದ್ದರು . ಶಾಲೆಗಳು ಮುಚ್ಚಿ ದೇಶ ಮತ್ತಷ್ಟು ಹಿಂದಕ್ಕೆ ಹೋಗುವುದನ್ನು ತಾವು ಬಯಸುವುದಿಲ್ಲ ಮತ್ತು ಪರಿಗಣಿಸುವುದೂ ಇಲ್ಲ ಎಂದು ಟ್ರಂಪ್ ಖಡಕ್ಕಾಗಿ ಹೇಳಿದ್ದಾರೆ.

No Comments

Leave A Comment