Log In
BREAKING NEWS >
ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ದೆಹಲಿ: ಏಮ್ಸ್ ಆಸ್ಪತ್ರೆ ಮೇಲಿಂದ ಜಿಗಿದು ಕೊರೋನಾ ಸೋಂಕಿತ ಪತ್ರಕರ್ತ ಆತ್ಮಹತ್ಯೆಗೆ ಯತ್ನ

ನವದೆಹಲಿ: ಕೊರೋನಾ ಸೋಂಕಿತ, ಪ್ರಮುಖ ಹಿಂದಿ ದಿನಪತ್ರಿಕೆಯೊಂದರ 34 ವರ್ಷದ ಪತ್ರಕರ್ತರೊಬ್ಬರು ದೆಹಲಿಯ ಏಮ್ಸ್ ಆಸ್ಪತ್ರೆಯ ನಾಲ್ಕನೆ ಮಹಡಿಯಿಂದ ಜಿಗಿದಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ಪತ್ರಕರ್ತ ಗಂಭೀರವಾಗಿ ಗಾಯಗೊಂಡಿದ್ದು, ಏಮ್ಸ್ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ.

ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟ ನಂತರ ತೀವ್ರ ಆತಂಕಗೊಂಡ ಪತ್ರಕರ್ತ, ತನ್ನ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಖಿನ್ನತೆಯ ಸಂದೇಶಗಳನ್ನು ಕಳುಹಿಸುತ್ತಿದ್ದರು ಮತ್ತು ತಾನು ಬಹಳ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವುದಾಗಿ ಹೇಳಿಕೊಂಡಿದ್ದರು.

‘ದೈನಿಕ ಭಾಸ್ಕರ್’ದ ಹಿರಿಯ ವರದಿಗಾರರಾಗಿರುವ ಈ ವ್ಯಕ್ತಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು, ಭಜನ್ ಪುರದಲ್ಲಿ ವಾಸಿಸುತ್ತಿದ್ದಾರೆ.

No Comments

Leave A Comment