Log In
BREAKING NEWS >
ನ್ಯಾಯಾಲಯ ಲಸಿಕೆಯ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಶ್ನಿಸಿದ್ದಕ್ಕೆ ಸಿಟಿರವಿ,ಕೇ೦ದ್ರ ಸಚಿವ ಸದಾನ೦ದ ಗೌಡರ ವರ್ತನೆಗೆ ರಾಜ್ಯದ ಎಲ್ಲೆಡೆ ಭಾರೀ ಆಕ್ರೋಶ....

ಆಕಾಶ ಮಾರ್ಗದಲ್ಲಿ ಢಿಕ್ಕಿಯಾಗಿ ಸರೋವರಕ್ಕೆ ಬಿದ್ದ ವಿಮಾನಗಳು: ಎಂಟು ಪ್ರಯಾಣಿಕರು ಸಾವು

ನ್ಯೂಯಾರ್ಕ್: ಆಕಾಶ ಮಾರ್ಗದಲ್ಲಿ ಎರಡು ವಿಮಾನಗಳು ಪರಸ್ಪರ ಢಿಕ್ಕಿಯಾಗಿ ಸರೋವರಕ್ಕೆ ಬಿದ್ದ ಘಟನೆ ಅಮೇರಿಕಾ ದೇಶದ ಇದಾಹೊ ರಾಜ್ಯದಲ್ಲಿ ನಡೆದಿದೆ. ಘಟನೆಯಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.

ಇದಾಹೊ ರಾಜ್ಯದ ಕೆಯೂರ್ ಡಿ ಅಲೆನ್ ಸರೋವರಕ್ಕೆ ಈ ಎರಡು ವಿಮಾನಗಳು ಅಪಘಾತವಾಗಿ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಈಗಾಗಲೇ ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ವರದಿಯಾಗಿದೆ.

ಎರಡು ಲಘು ವಿಮಾನಗಳಲ್ಲಿ ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇಬ್ಬರ ಶವವನ್ನು ಹೊರತೆಗೆಯಲಾಗಿದ್ದು, ಎರಡು ವರ್ಷದ ಮಗು ಸೇರಿ ಇನ್ನೂ ಆರು ಜನರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಘಟನೆಯಲ್ಲಿ ಅವರೆಲ್ಲಾ ಬದುಕಿ ಉಳಿಯುವ ಸಾಧ್ಯತೆ ಕಡಿಮೆ ಎಂದು ಸ್ಥಳೀಯ ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.

ಕೂಟನೈ ಕೌಂಟಿ ಶೆರಿಫ್ ವರದಿಯ ಪ್ರಕಾರ ಎರಡೂ ವಿಮಾನಗಳು ಸರೋವರದಲ್ಲಿ 127 ಅಡಿ ಆಳದಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

No Comments

Leave A Comment