Log In
BREAKING NEWS >
ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಪ್ರಾಧಿಕಾರದ ಪ್ರಥಮ ಸಭೆ: ಉಡುಪಿ ಮಾಸ್ಟರ್ ಪ್ಲಾನ್ ಗೆ ವೇಗ ನೀಡಲು ರಾಘವೇಂದ್ರ ಕಿಣಿ ಸೂಚನೆ

ಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಮಾಸ್ಟರ್ ಪ್ಲಾನ್ ನಿಧಾನಗತಿಯಲ್ಲಿ ಇದ್ದು ಇದಕ್ಕೆ ವೇಗ ನೀಡಿ ಮಾರ್ಚ್ 2021 ರ ಒಳಗೆ ಪೂರ್ಣಗೊಳಿಸುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ ಸೂಚಿಸಿದ್ದಾರೆ.

ಶನಿವಾರ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಪ್ರಥಮ ಸಭೆಯಲ್ಲಿ ಮಾತನಾಡಿದ ಅವರು, ಮಾಸ್ಟರ್ ಪ್ಲಾನ್ ವಹಿಸಿಕೊಂಡ ಕಂಪೆನಿಯು ತನ್ನ ನಿಧಾನಗತಿಯ ಕೆಲಸ ನಿರ್ವಹಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು, ತಕ್ಷಣ ಪ್ರಾಧಿಕಾರ ವಹಿಸಿದ ಹಲವಾರು ಕೆಲಸಗಳಿಗೆ ವೇಗ ನೀಡುವಂತೆ ಸೂಚಿಸಿದರು. ಸಭೆಯಲ್ಲಿ 2020 – 21 ನೇ ಸಾಲಿನ ಆಯವ್ಯಯಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭ ಖಾಸಗಿ ವಿನ್ಯಾಸಗಳಿಗೆ ಅಂತಿಮ ಅನುಮೋದನೆ ನೀಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಶಾಸಕರಾದ ಕೆ. ರಘುಪತಿ ಭಟ್ , ಲಾಲಾಜಿ ಮೆಂಡನ್, ಪ್ರಾಧಿಕಾರದ ಸದಸ್ಯರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ದಿನಕರ ಪೂಜಾರಿ, ಕಿಶೋರ್ ಕುಮಾರ್, ಸುಧಾ ನಾಯ್ಕ್, ಆಯುಕ್ತರಾದ ಕೆ. ರಾಜು, ನಗರ ಯೋಜನಾ ಸದಸ್ಯ ಜಿತೇಶ್, ಪೌರಾಯುಕ್ತ ಆನಂದಿ ಸಿ. ಕಲ್ಲೋಳಿಕರ್ ಉಪಸ್ಥಿತರಿದ್ದರು.

No Comments

Leave A Comment