Log In
BREAKING NEWS >
ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಚಿತ್ರೀಕರಣದಲ್ಲಿ ಭಾಗವಹಿಸಿದ್ದ ನಟಿಗೆ ಕೊರೋನಾ ಪಾಸಿಟಿವ್!

ಹೈದರಾಬಾದ್: ಕೊರೋನಾ ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ಚಿತ್ರಗಳ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದ್ದು, ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಖ್ಯಾತ ನಟಿಗೆ ಕೊರೋನಾ ಅಟ್ಯಾಕ್ ಆಗಿದೆ.

ತೆಲಂಗಾಣ ಸರ್ಕಾರ ಜೂನ್ 15ರಿಂದ ಧಾರಾವಾಹಿಗಳ ಚಿತ್ರೀಕರಣಕ್ಕೆ ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಹಲವು ಧಾರಾವಾಹಿಗಳ ಚಿತ್ರೀಕರಣ ಪ್ರಾರಂಭಗೊಂಡಿದ್ದವು. ಇದೀಗ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದೆ.

ತೆಲುಗು ಕಿರುತೆರೆ ನಟಿ ನವ್ಯಾ ಸ್ವಾಮಿ ಮಹಾಮಾರಿ ಕೊರೋನಾಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದ್ದು ಚಿತ್ರೀಕರಣದಲ್ಲಿ ಪಾಲ್ಗೊಂಡ ಇತರರು ಇದೀಗ ಆತಂಕಕ್ಕೀಡಾಗಿದ್ದಾರೆ.

ಮೈಸೂರು ಮೂಲದ ನಟಿ ನವ್ಯಾ ಸ್ವಾಮಿ ಅವರು ಕನ್ನಡ ಲಕುಮಿ, ತಂಗಾಳಿ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು. ನಂತರ ತೆಲುಗಿನಲ್ಲಿ ಅವಕಾಶ ಹುಡುಕಿಕೊಂಡು ಬಂದಿದ್ದು ನಾ ಪೇರು ಮೀನಾಕ್ಷಿಯಲ್ಲಿ ನಟಿಸುತ್ತಿದ್ದರು.

No Comments

Leave A Comment