Log In
BREAKING NEWS >
ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ರಚನೆ: 29 ಸಚಿವರಿಂದ ಪ್ರಮಾಣ ವಚನ ಸ್ವೀಕಾರ...

3ನೇ ಮದುವೆಯಾದ ನಟಿಗೆ ಮೂರನೇ ದಿನಕ್ಕೆ ಬಿಗ್ ಶಾಕ್!

ಚೆನ್ನೈ: ನಟಿ ವನಿತಾ ವಿಜಯಕುಮಾರ್ ಅವರು ಇತ್ತೀಚೆಗಷ್ಟೇ ಪೀಟರ್ ಪೌಲ್ ಎಂಬುವರ ಜೊತೆ ಮೂರನೇ ಮದುವೆಯಾಗಿದ್ದರು.

ವನಿತಾ ವಿಜಯಕುಮಾರ್ ಅವರು ತಮಿಳು ನಟ ವಿಜಯ್ ಕುಮಾರ್ ಅವರ ಹಿರಿಯ ಮಗಳು. ತಮ್ಮ 20ನೇ ವಯಸ್ಸಿನಲ್ಲಿ ನಟ ಆಕಾಶ್ ಎಂಬುವರನ್ನು ವನಿತಾ ಮದುವೆಯಾಗಿದ್ದರು. 5 ವರ್ಷಗಳ ಸಂಸಾರ ನಡೆಸಿದ್ದ ನಂತರ ವನಿತಾ ಆತನಿಂದ ವಿಚ್ಛೇದನ ಪಡೆದಿದ್ದರು. ಬಳಿಕ 2007ರಲ್ಲಿ ಉದ್ಯಮಿ ರಾಜನ್ ಆನಂದ್ ಅವರನ್ನು ಮದುವೆಯಾಗಿದ್ದರು. ಆತನಿಗೂ ನಟಿ ವಿಚ್ಛೇದನ ನೀಡಿದ್ದರು.

ಮದುವೆಯಾದ ಮೂರನೇ ದಿನಕ್ಕೆ ನಟಿಗೆ ಶಾಕ್ ಎದುರಾಗಿದೆ. ಹೌದು ಪೀಟರ್ ಪೌಲ್ ಅವರ ಪತ್ನಿ ಎಲಿಜಬೆತ್ ಅವರು ನನಗೆ ವಿಚ್ಛೇದನ ನೀಡದೆ ಮತ್ತೊಂದು ಮದುವೆಯಾಗಿದ್ದಾರೆ ಎಂದು ಪೀಟರ್ ವಿರುದ್ಧ ದೂರು ದಾಖಲಿಸಿದ್ದಾರೆ.

ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಇನ್ನೊಂದು ಮದುವೆಯಾಗಿರುವ ಪೀಟರ್ ಪೌಲ್ ಗೆ ಇದೀಗ ಸಂಕಷ್ಟ ಎದುರಾಗಿದೆ.

No Comments

Leave A Comment