Log In
BREAKING NEWS >
ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ರಚನೆ: 29 ಸಚಿವರಿಂದ ಪ್ರಮಾಣ ವಚನ ಸ್ವೀಕಾರ...

ಉಯಿಘರ್‌ ಮುಸ್ಲಿಂ ಜನಸಂಖ್ಯೆ ನಿಗ್ರಹಕ್ಕೆ ಬಲವಂತದ ಗರ್ಭಪಾತ

ಬೀಜಿಂಗ್‌: ದೇಶದಲ್ಲಿನ ಮುಸ್ಲಿಂ ಜನಸಂಖ್ಯೆ­ಯನ್ನು ನಿಗ್ರಹಿಸುವ ವ್ಯಾಪಕ ಅಭಿಯಾನದ ಅಂಗವಾಗಿ ಉಯಿಘರ್‌ ಮತ್ತು ಇತರ ಅಲ್ಪಸಂಖ್ಯಾಕರಲ್ಲಿ ಜನನದ ಪ್ರಮಾಣವನ್ನು ಕಡಿತಗೊಳಿಸಲು ಚೀನ ಸರಕಾರ ಕಠಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಲ್ಲದೆ, ದೇಶದ ಬಹುಸಂಖ್ಯಾಕ‌ ಹ್ಯಾನ್‌ ಸಮುದಾಯ­ದವರಿಗೆ ಹೆಚ್ಚಿನ ಮಕ್ಕಳನ್ನು ಹೊಂದಲು ಉತ್ತೇಜನ ನೀಡುತ್ತಿದೆ. ಈ ಅಭಿಯಾನವನ್ನು ಈಗ ಹಿಂದಿಗಿಂತ ಹೆಚ್ಚು ವ್ಯಾಪಕವಾಗಿ ಹಾಗೂ ವ್ಯವಸ್ಥಿತ­ವಾಗಿ ನಡೆಸ­ಲಾ­ಗುತ್ತಿದೆ. ಅದರಲ್ಲೂ ವಿಶೇಷ­ವಾಗಿ, ಉಯಿಘರ್‌ ಸ್ವಾಯತ್ತ ಪ್ರದೇಶವಾಗಿ­ರುವ ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ಇದು ಹೆಚ್ಚಿದೆ. ಇಲ್ಲಿನ ಅಲ್ಪಸಂಖ್ಯಾಕ‌ ಮಹಿಳೆಯರನ್ನು ನಿಯಮಿತವಾಗಿ ಗರ್ಭಧಾರಣೆಯ ತಪಾ­ಸಣೆಗೆ ಒಳಪಡಿಸಲಾಗುತ್ತದೆ. ಅವರಿಗೆ ಗರ್ಭ­ನಿರೋ­ಧಕ ಬಳಸಲು ಆಗ್ರಹಿಸಲಾ­ಗುತ್ತದೆ. ಸಂತಾನ ಶಕ್ತಿಹರಣ ಹಾಗೂ ಬಲವಂತದ ಗರ್ಭಪಾತಕ್ಕೆ ಒತ್ತಾಯಿಸಲಾಗುತ್ತದೆ.

ಹೆಚ್ಚಿನ ಮಕ್ಕಳನ್ನು ಹೊಂದಿರುವವರನ್ನು ನಿರಾಶ್ರಿ­ತರ ಶಿಬಿರಗಳಲ್ಲಿ ಬಲವಂತದ ಬಂಧನಕ್ಕೆ ಒಳಪಡಿಸಲಾಗುತ್ತದೆ. ಮೂರಕ್ಕಿಂತ ಹೆಚ್ಚಿನ ಮಕ್ಕ­ಳಿದ್ದರೆ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆ. ಪೊಲೀಸರು ಮನೆಗಳ ಮೇಲೆ ಆಗಾಗ ದಾಳಿ ಮಾಡಿ, ಹೆಚ್ಚಿನ ಮಕ್ಕಳಿರುವ ಪೋಷಕ­ರನ್ನು ಬೆದರಿಸುತ್ತಾರೆ. ಇಂಥ ಬಲವಂತದ ಜನಸಂಖ್ಯಾ ನಿಯಂತ್ರಣ, ಒಂದು ರೀತಿಯ ಜನಾಂಗೀಯ ಹತ್ಯಾ­ಕಾಂಡದ ರೂಪ ಎಂದು “ಅಸೋಸಿಯೇಟೆಡ್‌ ಪ್ರಸ್‌’ ವರದಿ ಮಾಡಿದೆ. ಈ ಮಧ್ಯೆ, 2015-18ರ ಅವಧಿ­ಯಲ್ಲಿ ಉಯಿಘರ್‌ ಪ್ರಾಂತ್ಯದ ಹೋಟನ್‌ ಮತ್ತು ಕಾಶರ್‌ ವಲಯಗಳಲ್ಲಿ ಜನನ ಪ್ರಮಾಣ ಶೇ.60ರಷ್ಟು ಕುಸಿದಿದೆ ಎಂಬುದನ್ನು ಚೀನ ಸರಕಾರದ ಅಂಕಿ-ಅಂಶಗಳೇ ಹೇಳುತ್ತವೆ.

No Comments

Leave A Comment