Log In
BREAKING NEWS >
ಎಸ್‌ಪಿ ಬಾಲಸುಬ್ರಹ್ಮಣ್ಯಂ ನಿಧನ! ಶಾಶ್ವತವಾಗಿ ಹಾಡು ನಿಲ್ಲಿಸಿದ ಲೆಜೆಂಡರಿ ಗಾಯಕ!....ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ

ಚೀನಿ ಸೇನೆಗೆ ಆಘಾತ ನೀಡುತ್ತೆ ಘಾತಕ್‌ ಪಡೆ

ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಭಾರತ ಹಾಗೂ ಚೀನ ನಡುವಿನ ಬಿಗುವಿನ ವಾತಾವರಣ ದಿನೇ ದಿನೆ ಬಿಗಡಾಯಿಸುತ್ತಾ ಸಾಗಿರುವ ನಡುವೆಯೇ ಎಲ್‌ಎಸಿಯಲ್ಲಿ ನಿಯೋಜನೆಗೊಂಡಿರುವ ತನ್ನ ಸೈನಿಕರಿಗೆ ಚೀನ, ಮಾರ್ಷಲ್‌ ಆರ್ಟ್ಸ್ ತರಬೇತಿ ನೀಡುತ್ತಿದೆ.

ಆದರೆ, ಭಾರತವೇನೂ ಕೈಕಟ್ಟಿ ಕುಳಿತಿಲ್ಲ. ಚೀನ ಯಾವುದೇ ರೀತಿಯ ದಾಳಿ ನಡೆಸಿದರೂ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಸಮರ್ಥವಾಗಿರುವ ಯೋಧರ ಪಡೆಗಳು ಈಗಾಗಲೆ ಭಾರತದ ಪಾಳಯದಲ್ಲಿ ಸರ್ವ ಸನ್ನದ್ಧವಾಗಿ ನಿಂತಿವೆ.

ಅಂತಹ­ವುಗಳಲ್ಲಿ ಒಂದು ‘ಘಾತಕ್‌’ ಕಮಾಂಡೊ ಪಡೆ. ಘಾತಕ್‌ ಅದೆಷ್ಟು ಸಮರ್ಥ ಕಮಾಂಡೊಗಳನ್ನು ಒಳಗೊಂಡ ಪಡೆ ಎಂದರೆ, ಚೀನದ ಮಾರ್ಷಲ್‌ ಆರ್ಟ್ಸ್ ತರಬೇತಿ ಪಡೆದ ಸೈನಿಕರು ಈ ಕಮಾಂಡೊಗಳ ಮುಂದೆ ಮಂಕಾಗುತ್ತಾರೆ.

ಏನಿದು ಘಾತಕ್‌ ಪಡೆ?
– ಕಾಲಾಳು ಪಡೆಯಲ್ಲೇ ದೈಹಿಕ­ವಾಗಿ ಅತ್ಯಂತ ಸದೃಢರಾಗಿ­ರುವ ಯೋಧರ ತಂಡ ಇದು.
– ಪ್ರತಿಯೊಬ್ಬ ಘಾತಕ್‌ ಕಮಾಂ­ಡೊಗೆ 45 ದಿನಗಳ ಕಠಿನ ತರಬೇತಿ.
– ಮಾರ್ಷಲ್‌ ಆರ್ಟ್ಸ್ ತರಬೇತಿ ಪಡೆದಿರುವ ಕಮಾಂಡೊಗಳು, ಮಲ್ಲ ಯುದ್ಧದಲ್ಲೂ ಪ್ರವೀಣರು.
– 35 ಕೆ.ಜಿ ಭಾರ ಹೊತ್ತು 40 ಕಿ.ಮೀ ದೂರದವರೆಗೆ ಓಡುವ ಸಾಮರ್ಥ್ಯ ಕಮಾಂಡೊಗಳಿಗಿರುತ್ತದೆ.
– ವಿಶೇಷ ಕಾರ್ಯಾಚರಣೆ, ಯುದ್ಧದ ವೇಳೆ ಭಾರೀ ತೂಕದ ಶಸ್ತ್ರಾಸ್ತ್ರ ಹೊತ್ತು ಮುನ್ನೆಲೆ­ಯಲ್ಲಿ ನಿಂತು ಹೋರಾಡುವುದು ಇದರ ಕೆಲಸ.
– ಯಾರ ಬೆಂಬಲವೂ ಇಲ್ಲದೆ ತಾವೊಬ್ಬರೇ ಶತ್ರುವಿನ ಮೇಲೆ ದಾಳಿ ಮಾಡುವುದು ಇವರ ವೈಶಿಷ್ಟ್ಯ.
– ಹೆಲಿಬಾರ್ನ್ ದಾಳಿ, ಪರ್ವತ ಸಂಗ್ರಾಮ, ರಾಕ್‌ ಕ್ಲೈಂಬಿಂಗ್‌, ಡೆಮಾಲಿಷನ್‌, ಮುಖಾ­ಮುಖಿ ಕಾದಾಟ ಮತ್ತು ಆಡಳಿತ, ವ್ಯವಸ್ಥಾಪನೆ ಕುರಿತಂತೆಯೂ ತರಬೇತಿ ಪಡೆದಿರುತ್ತಾರೆ.

ಎಲ್ಲಿದೆ ಈ ಘಾತಕ್‌ ಪಡೆ?
ಚೀನಿ ಸೈನಿಕರಿಗೆ ಮಾರ್ಷಲ್‌ ಆರ್ಟ್ಸ್ ತರಬೇತಿ ನೀಡಿ ಲಡಾಖ್‌ ಬಳಿಯ ಗಡಿಯಲ್ಲಿ ನಿಯೋ­ಜಿಸಲಾಗಿದೆ. ಸರಿ­ಯಾಗಿ ಅವರಿಗೆ ಎದು­ರಾಗಿ ಭಾರತದ ಭಾಗದ ಗಡಿಯಲ್ಲಿ ಘಾತಕ್‌ ಕಮಾಂಡೊಗಳು ನಿಂತಿದ್ದಾರೆ.

ನಮ್ಮ ಬೆಳಗಾವಿಯಲ್ಲಿ ತರಬೇತಿ
ವಿಶೇಷವೇನೆಂದರೆ ಘಾತಕ್‌ ಕಮಾಂಡೊಗಳಿಗೆ ತರಬೇತಿ ನೀಡುತ್ತಿರುವುದು ಬೆಳಗಾವಿಯಲ್ಲಿ. ಸಾಮಾನ್ಯವಾಗಿ ಈ ಪಡೆಯಲ್ಲಿ 20 ಕಮಾಂಡೊಗಳಿ­ರುತ್ತಾರೆ. ಆ ಪೈಕಿ, ಒಬ್ಬ ಕಮಾಂಡಿಂಗ್‌ ಕ್ಯಾಪ್ಟನ್‌, ಇಬ್ಬರು ಅನಿಯೋಜಿತ ಅಧಿಕಾರಿ­ಗಳು, ಮಾರ್ಕ್ಸ್ ಮ್ಯಾನ್ ಮತ್ತು ಸ್ಪಾಟರ್‌ ಜೋಡಿ, ಲೈಟ್‌ ಮೆಷೀನ್‌ ಗನ್ನರ್‌ಗಳು ಮತ್ತು ರೇಡಿಯೋ ಆಪರೇಟರ್‌ಗಳು ಈ ತಂಡದಲ್ಲಿರು­ತ್ತಾರೆ. ಉಳಿದವರು ದಾಳಿ ಪಡೆಯ ರೀತಿ ಕಾರ್ಯ­ನಿರ್ವಹಿಸುತ್ತಾರೆ.

No Comments

Leave A Comment