Log In
BREAKING NEWS >
ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೂ ಕೊರೊನಾ ಪಾಸಿಟೀವ್‌!...

ರಾಜ್ಯದಲ್ಲಿ 1,105 ಹೊಸ ಕೊರೋನಾ ಪ್ರಕರಣಗಳು, 19 ಮಂದಿ ಸಾವು; ಸೋಂಕಿತರ ಸಂಖ್ಯೆ 14,295ಕ್ಕೇರಿಕೆ

ಬೆಂಗಳೂರು: ರಾಜ್ಯದಲ್ಲಿ ಸೋಮವಾರ 1,105 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು, 19 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 14295ಕ್ಕೇರಿಕೆಯಾಗಿದೆ.

ಒಟ್ಟು 7685 ಮಂದಿ ಚೇತರಿಕೆ ಹೊಂದಿದ್ದು, 6382 ಸಕ್ರಿಯ ಪ್ರಕರಣಗಳಿವೆ. 230 ಮಂದಿ ಮೃತಪಟ್ಟಿದ್ದಾರೆ.

ಬೆಂಗಳೂರು ನಗರದಲ್ಲಿ 738, ಬಳ್ಳಾರಿಯಲ್ಲಿ 76, ದಕ್ಷಿಣ ಕನ್ನಡದಲ್ಲಿ 32, ಬೀದರ್‌ನಲ್ಲಿ ತಲಾ 28, ಉತ್ತರ ಕನ್ನಡದಲ್ಲಿ 24, ಕಲಬುರಗಿಯಲ್ಲಿ 23, ಹಾನಸ, ವಿಜಯಪುರದಲ್ಲಿ ತಲಾ 22, ತುಮಕೂರು, ಉಡುಪಿಯಲ್ಲಿ ತಲಾ 18, ಧಾರವಾಡ, ಚಿಕ್ಕಮಗಳೂರಿನಲ್ಲಿ ತಲಾ 17, ಚಿಕ್ಕಬಳ್ಳಾಪುರದಲ್ಲಿ 15, ಯಾದಗಿರಿಯಲ್ಲಿ 9, ಮಂಡ್ಯದಲ್ಲಿ 8, ಮೈಸೂರಿನಲ್ಲಿ 6, ಶಿವಮೊಗ್ಗದಲ್ಲಿ 5, ರಾಯಚೂರು, ಬಾಗಲಕೋಟೆ, ಗದಗ, ಕೋಲಾರದಲ್ಲಿ ತಲಾ 4, ಬೆಂಗಳೂರು ಗ್ರಾಮಾಂತರದಲ್ಲಿ 3, ದಾವಣಗೆರೆ, ರಾಮನಗರ, ಚಿತ್ರದುರ್ಗದಲ್ಲಿ ತಲಾ 2, ಹಾವೇರಿ, ಕೊಡಗಿನಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ.

No Comments

Leave A Comment