Log In
BREAKING NEWS >
ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೂ ಕೊರೊನಾ ಪಾಸಿಟೀವ್‌!...

1-5 ತರಗತಿ:ಆನ್‌ಲೈನ್‌ ಶಿಕ್ಷಣಕ್ಕೆ ಅವಕಾಶ

ಬೆಂಗಳೂರು: 1ರಿಂದ 5ನೇ ತರಗತಿಯ ವರೆಗೆ ಮತ್ತೆ ಆನ್‌ಲೈನ್‌ ಶಿಕ್ಷಣ ಜಾರಿಯಾಗಿದೆ. ಈ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಬೇಡವೆಂದು ರದ್ದು ಮಾಡಿದ್ದ ಸರಕಾರ ಈಗ ನಿಯಮಿತ ಅವಕಾಶ ನೀಡಿ ಹೊಸ ಆದೇಶ ಹೊರಡಿಸಿದೆ.

ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವಾಲಯದ ಮಾರ್ಗಸೂಚಿ ಮತ್ತು ರಾಜ್ಯ ಹೈಕೋರ್ಟ್‌ ಸಲಹೆ ಯಂತೆ ಆನ್‌ಲೈನ್‌ ಶಿಕ್ಷಣದ ಕುರಿತಾಗಿ ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ, ಐಸಿಎಸ್‌ಇ ಸಹಿತ ಎಲ್ಲ ಪಠ್ಯ ಕ್ರಮದ ಶಾಲೆಗಳಿಗೆ ಅನ್ವಯ ವಾಗು ವಂತೆ ರಾಜ್ಯ ಸರಕಾರ ಹೊಸ ಆದೇಶ ಹೊರಡಿಸಿದೆ. ಆದರೆ ಇದಕ್ಕಾಗಿ ಹೆಚ್ಚುವರಿ ಶುಲ್ಕ ಪಡೆಯದಂತೆ ತಿಳಿಸಿದೆ.

ರಾಜ್ಯ ಸರಕಾರದ ಸಮಿತಿ ವರದಿ ನೀಡುವವರೆಗೂ ಹೊಸದಾಗಿ ಹೊರಡಿಸಿರುವ ಆದೇಶದಂತೆ ಆನ್‌ಲೈನ್‌ ತರಗತಿ ನಡೆಸಲು ಸರಕಾರ ಅನುಮತಿ ಕಲ್ಪಿಸಿ ಕೊಟ್ಟಿದೆ.

ಹೊಸ ಆದೇಶದಲ್ಲೇನಿದೆ?
ಪೂರ್ವ ಪ್ರಾಥಮಿಕ ತರಗತಿಗಳಿಗೆ ಆನ್‌ಲೈನ್‌ ತರಗತಿ ಇರುವುದಿಲ್ಲ. ಆದರೆ 30 ನಿಮಿಷಗಳಿಗೆ ಮೀರದಂತೆ ಪಾಲಕರೊಂದಿಗೆ ಮಾತ್ರ ವಾರಕ್ಕೆ ಒಂದು ದಿನ ಆನ್‌ಲೈನ್‌ ಸಂವಹನ ಮತ್ತು ಮಾರ್ಗ ದರ್ಶನ ನೀಡಬಹುದು.

1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 30ರಿಂದ 45 ನಿಮಿಷ ಗಳ 2 ಅವಧಿ ಮೀರ ದಂತೆ ದಿನ ಬಿಟ್ಟು ದಿನ (ವಾರ ದಲ್ಲಿ ಗರಿಷ್ಠ 3 ದಿನ) ಆನ್‌ಲೈನ್‌ ಶಿಕ್ಷಣ ನೀಡಬಹುದು.

6ರಿಂದ 8ನೇ ತರಗತಿಯವರಿಗೆ 30ರಿಂದ 45 ನಿಮಿಷ ಗಳ 2 ಅವಧಿ ಮೀರ ದಂತೆ ವಾರದಲ್ಲಿ 5 ದಿನ, 9 ಮತ್ತು 10ಕ್ಕೆ 30ರಿಂದ 45 ನಿಮಿಷ ಗಳ 4 ಅವಧಿ ಮೀರ ದಂತೆ ವಾರದಲ್ಲಿ 5 ದಿನ ಸಿಂಕ್ರೋನಸ್‌ ವಿಧಾನದ ಮೂಲಕ ಆನ್‌ಲೈನ್‌ ತರಗತಿ ನಡೆಸಲು ಅವಕಾಶ ಕಲ್ಪಿಸಿದೆ.

No Comments

Leave A Comment