Log In
BREAKING NEWS >
ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೂ ಕೊರೊನಾ ಪಾಸಿಟೀವ್‌!...

ಉಡುಪಿ: ಹೊಟೇಲ್ ಕುಕ್ ಗೆ ಕೋವಿಡ್ ಸೋಂಕು ; ಆತಂಕದಲ್ಲಿ ಗ್ರಾಹಕರು!

ಉಡುಪಿ: ಕರಾವಳಿ ಬೈಪಾಸ್ ನಿಂದ ಉಡುಪಿ ನಗರವನ್ನು ಸಂಪರ್ಕಿಸುವ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಬನ್ನಂಜೆಯಯಲ್ಲಿರುವ ಹೊಟೇಲೊಂದರ ಅಡುಗೆ ತಯಾರಕನಿಗೆ ಇಂದು ಕೋವಿಡ್ 19 ಸೋಂಕು ದೃಢಪಟ್ಟಿದೆ.

ಈ ಹೊಟೇಲ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ವರದಿ ಪಾಸಿಟಿವ್ ಬಂದ ಕಾರಣ ಇದೀಗ ಈ ಹೊಟೇಲನ್ನು ಸೀಲ್ ಡೌನ್ ಮಾಡಲಾಗಿದೆ.

ಇಲ್ಲಿನ ಅಡುಗೆ ತಯಾರಿಸುವ ವ್ಯಕ್ತಿಗೆ ಕೋವಿಡ್ 19 ಸೋಂಕು ದೃಢವಾಗುತ್ತಿದ್ದಂತೆ ಕಳೆದ ಕೆಲವು ದಿನಗಳಿಂದ ಇಲ್ಲಿಗೆ ಭೇಟಿ ನೀಡಿದ್ದ ಗ್ರಾಹಕರಿಗೆ ಹಾಗೂ ಪಾರ್ಸೆಲ್ ತೆಗೆದುಕೊಂಡು ಹೋದವರಿಗೆ ಇದೀಗ ಆತಂಕ ಶುರುವಾಗಿದೆ.

No Comments

Leave A Comment