Log In
BREAKING NEWS >
ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೂ ಕೊರೊನಾ ಪಾಸಿಟೀವ್‌!...

ಮತ್ತೆರಡು ದೇಶಗಳ ನಡುವೆ ಉದ್ವಿಗ್ನತೆ: ಅಲಾಸ್ಕಾದಲ್ಲಿ ರಷ್ಯಾ ಯುದ್ಧ ವಿಮಾನಗಳಿಗೆ ಅಮೆರಿಕ ತಡೆ!

ವಾಷಿಂಗ್ಟನ್: ಭಾರತ-ಚೀನಾ ಗಡಿ ಘರ್ಷಣೆ ಹಾಗೂ ಉದ್ವಿಗ್ನತೆಯಿಂದ ಇಡೀ ವಿಶ್ವ ಆತಂಕದಲ್ಲಿದೆ. ಚೀನಾದ ಯುದ್ಧೋನ್ಮಾದ ದಕ್ಷಿಣ ಏಷ್ಯಾ ಜೊತೆಗ ವಿಶ್ವ ಶಾಂತಿಯ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಮಧ್ಯೆ ಅಮೆರಿಕ-ರಷ್ಯಾ ನಡುವೆ ಸಣ್ಣದೊಂದು ಮಿಲಿಟರಿ ವ್ಯಾಜ್ಯ ಸಂಭವಿಸಿದ್ದು, ಅಲಾಸ್ಕಾ ಬಳಿ ರಷ್ಯಾ ವಾಯುಸೇನೆಯ ಯುದ್ಧ ವಿಮಾನಗಳ ಹಾರಾಟಕ್ಕೆ ಅಮೆರಿಕ ತಡೆಯೊಡ್ಡಿದೆ.

ರಷ್ಯಾದ ನಾಲ್ಕು Tu-142’s ಯುದ್ಧ ವಿಮಾನಗಳು ದಕ್ಷಿಣ ಅಲಾಸ್ಕಾದ ಅಲ್ಯೂಟಿಯನ್ ದ್ವೀಪದ ಮೇಲೆ ಹಾರಾಟ ನಡೆಸಿದೆ. ಇದು ಅಲಾಸ್ಕಾ ವಾಯು ರಕ್ಷಣಾ ಒಪ್ಪಂದ ಉಲ್ಲಂಘನೆ ಎಂದು ಅಮೆರಿಕ ಅಸಮಾಧಾನ ಹೊರಹಾಕಿದೆ.

ಆಗಸದಲ್ಲಿ ರಷ್ಯಾದ ಯುದ್ಧ ವಿಮಾನಗಳು ಗೋಚರವಾದ ಕೂಡಲೇ ಕಾರ್ಯಪ್ರವೃತ್ತವಾದ ಅಮೆರಿಕ ವಾಯುಸೇನೆಯ F-22 ಯುದ್ಧ ವಿಮಾನಗಳು, ರಷ್ಯಾದ ನಾಲ್ಕೂ ಯುದ್ಧ ವಿಮಾನಗಳನ್ನು ವಾಪಸ್ ಕಳಿಸುವಲ್ಲಿ ಯಶಸ್ವಿಯಾಗಿವೆ.

ರಷ್ಯಾ ಯುದ್ಧ ವಿಮಾನಗಳು ಅಮೆರಿಕ ಅಥವಾ ಕೆನಡಾದ ವಾಯುಗಡಿ ಪ್ರವೇಶಿಸಿಲ್ಲವಾದರೂ, ಮುಂಜಾಗ್ರತಾ ಕ್ರಮವಾಗಿ ಅವುಗಳ ಹಾರಾಟವನ್ನು ತಡೆಗಟ್ಟುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಅಮೆರಿಕ ವಾಯುಸೇನೆ ಸ್ಪಷ್ಟಪಡಿಸಿದೆ.

No Comments

Leave A Comment