ಲಂಡನ್: ಸುದೀರ್ಘ 233 ವರ್ಷಗಳ ಇತಿಹಾಸವುಳ್ಳ ಇಂಗ್ಲೆಂಡಿನ ಪ್ರತಿಷ್ಠಿತ “ಮೆರಿಲ್ಬಾನ್ ಕ್ರಿಕೆಟ್ ಕ್ಲಬ್’ (ಎಂಸಿಸಿ) ಅಧ್ಯಕ್ಷ ಹುದ್ದೆಗೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಆಯ್ಕೆಯಾಗಲಿದ್ದಾರೆ. ಈ ಅದೃಷ್ಟಶಾಲಿ ಕ್ಲೇರ್ ಕಾನರ್.
ಇವರು ಮುಂದಿನ ವರ್ಷದ ಅಕ್ಟೋಬರ್ ಒಂದರಂದು ಕುಮಾರ ಸಂಗಕ್ಕರ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಸಂಗಕ್ಕರ ತಮ್ಮ ದ್ವಿತೀಯ ವರ್ಷಾದ ಅಧಿಕಾರಾವಧಿಗೆ ಸಜ್ಜಾಗುತ್ತಿದ್ದಾರೆ.
ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಕ್ಲೇರ್ ಕಾನರ್ ಹೆಸರನ್ನು ಪ್ರಕಟಿಸಲಾಯಿತು. ಸದ್ಯ ಅವರು ಇಸಿಬಿ ವನಿತಾ ಕ್ರಿಕೆಟಿನ ಆಡಳಿತ ನಿರ್ದೇಶಕಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. 2009ರಲ್ಲಿ ಅವರಿಗೆ ಎಂಸಿಸಿ ಗೌರವ ಸದಸ್ಯತ್ವ ನೀಡಲಾಗಿತ್ತು.