Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಕೊರೋನಾ ಭೀತಿ: ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇ ಆಚರಣೆಗೆ ಬ್ರೇಕ್!

ಬೆಂಗಳೂರು: ಮಾರಕ ಕೊರೋನಾ ವೈರಸ್ ಭೀತಿ ಚಿತ್ರರಂಗಕ್ಕೆ ಇನ್ನಿಲ್ಲದಂತೆ ಕಾಡುತ್ತಿದ್ದು, ಇದೀಗ ಸ್ಯಾಂಡಲ್ ವುಡ್ ಸ್ಟಾರ್ ನಟರ ಬರ್ತ್ ಡೇ ಆಚರಣೆಗೂ ಕೋವಿಡ್-19 ವೈರಸ್ ಭೀತಿ ಬ್ರೇಕ್ ಹಾಕಿದೆ.

ಹೌದು.. ಕೊರೋನ ವೈರಸ್ ಸೋಂಕು ಭೀತಿಯಿಂದಾಗಿ ಹಲವು ಸ್ಟಾರ್ ನಟರು ಈ ವರ್ಷ ತಮ್ಮ ಬರ್ತ್ ಡೇ ಆಚರಿಸುತ್ತಿಲ್ಲ. ಇದೀಗ ಗಣೇಶ್ ಕೂಡಾ ಇದೇ ಹಾದಿಯಲ್ಲಿ ನಡೆದಿದ್ದಾರೆ. ಜುಲೈ 4 ರಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬವಿದ್ದು ಅಂದು ಯಾವುದೇ ರೀತಿಯ ಆಚರಣೆ ಇರುವುದಿಲ್ಲ ಎಂದು ಗಣೇಶ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಗಣೇಶ್, ‘ಪ್ರೀತಿಯ ಸ್ನೇಹಿತರೇ, Covid 19 ನಿಂದಾಗಿ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ನೇರವಾಗಿ ನಿಮ್ಮನ್ನು ಭೇಟಿಮಾಡಿ ಆಚರಿಸಲಾಗುತ್ತಿಲ್ಲ.. ಕ್ಷಮೆಯಿರಲಿ..  ನಿಮ್ಮ ಪ್ರೀತಿ ಹಾರೈಕೆ ಶುಭಾಶಯ ಸದಾ ನನ್ನ ಜೊತೆಯಿರಲಿ.. ಎಲ್ಲರಿಗೂ ಒಳ್ಳೆಯದಾಗಲಿ..” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

No Comments

Leave A Comment