Log In
BREAKING NEWS >
ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೂ ಕೊರೊನಾ ಪಾಸಿಟೀವ್‌!...

ಆಗ್ನೇಯ ದೆಹಲಿಯ ತುಘಲಕಾಬಾದ್ ನಲ್ಲಿ ಬೆಂಕಿ ಅವಘಡ: 120 ಗುಡಿಸಲುಗಳು ಭಸ್ಮ

ನವದೆಹಲಿ: ಆಗ್ನೇಯ ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ ಬುಧವಾರ ನಸುಕಿನ ಜಾವ ಅಗ್ನಿ ದುರಂತ ಸಂಭವಿಸಿ 120ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮವಾಗಿವೆ.

ತುಘಲಕಾಬಾದ್ ನ ವಾಲ್ಮೀಕಿ ಮೊಹಲ್ಲಾ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಅಗ್ನಿ ಹೊತ್ತಿ ಉರಿಯಲಾರಂಭಿಸಿದ ಕೂಡಲೇ ಮಧ್ಯರಾತ್ರಿ 1.30ರ ಹೊತ್ತಿಗೆ 22 ಅಗ್ನಿಶಾಮಕ ಎಂಜಿನ್ ಗಳು ಬಂದು ಬೆಂಕಿಯನ್ನು ನಂದಿಸಿದವು.

ಘಟನೆಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ. ಕೆಲ ದಿನಗಳ ಹಿಂದೆ ಕೂಡ ಇದೇ ಪ್ರದೇಶದಲ್ಲಿ ಬೆಂಕಿ ಹತ್ತಿ ಉರಿತು 250ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮವಾಗಿದ್ದವು.

No Comments

Leave A Comment